ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರು ಪೊಲೀಸರಿಗೆ ಕೇಂದ್ರ ಗೃಹ ಸಚಿವರ ಪದಕ

Published 12 ಆಗಸ್ಟ್ 2023, 14:12 IST
Last Updated 12 ಆಗಸ್ಟ್ 2023, 14:12 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಪಟ್ಟ ಅಪರಾಧ ಪ್ರಕರಣಗಳ ತನಿಖೆಯನ್ನು ಯಶಸ್ವಿಯಾಗಿ ನಡೆಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಕ್ರಮ ವಹಿಸಿದ್ದ ರಾಜ್ಯದ ಐವರು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ 2023ನೇ ಸಾಲಿನ ಪದಕ ಲಭಿಸಿದೆ.

ಕರ್ನಾಟಕ ಸಚಿವಾಲಯದ ಡಿವೈಎಸ್ಪಿ ಶಂಕರ್ ಎಂ. ರಾಗಿ, ತಾವರೆಕೆರೆ ಠಾಣೆ ಇನ್‌ಸ್ಪೆಕ್ಟರ್ ರಾಮಪ್ಪ ಬಿ. ಗುತ್ತೇರ, ಬೆಂಗಳೂರು ಹೈಗ್ರೌಂಡ್ಸ್ ಠಾಣೆ ಇನ್‌ಸ್ಪೆಕ್ಟರ್ ಸಿ.ಬಿ. ಶಿವಸ್ವಾಮಿ, ಆರ್‌ಎಂಸಿ ಯಾರ್ಡ್ ಠಾಣೆ ಇನ್‌ಸ್ಪೆಕ್ಟರ್ ಪಿ. ಸುರೇಶ್ ಹಾಗೂ ಶಿವಮೊಗ್ಗ ವಿನೋಬನಗರದ ಇನ್‌ಸ್ಪೆಕ್ಟರ್ ರುದ್ರೇಗೌಡ ಆರ್. ಪಾಟೀಲ ಅವರು ಪದಕಕ್ಕೆ ಭಾಜನರಾಗಿದ್ದಾರೆ.

‘ದೇಶದ 140 ಪೊಲೀಸ್‌ ಅಧಿಕಾರಿಗಳು ಈ ಬಾರಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ತನಿಖೆಯಲ್ಲಿ ಶ್ರೇಷ್ಠತೆ ಗುರುತಿಸುವ ಉದ್ದೇಶದಿಂದ 2018ರಿಂದ ಈ ಪದಕ ನೀಡಲಾಗುತ್ತಿದೆ’ ಎಂದು ಕೇಂದ್ರ ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಪಿ. ಸುರೇಶ್
ಪಿ. ಸುರೇಶ್
ರುದ್ರೇಗೌಡ ಆರ್‌. ಪಾಟೀಲ
ರುದ್ರೇಗೌಡ ಆರ್‌. ಪಾಟೀಲ
ಶಂಕರ್ ಎಂ. ರಾಗಿ
ಶಂಕರ್ ಎಂ. ರಾಗಿ
ರಾಮಪ್ಪ ಬಿ. ಗುತ್ತೇರ
ರಾಮಪ್ಪ ಬಿ. ಗುತ್ತೇರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT