ಮಂಗಳವಾರ, ಜನವರಿ 21, 2020
19 °C

ಹುಳಿಮಾವು ಕೆರೆ– ಕೋಡಿ ಒಡೆದ ಪ್ರಕರಣ: ಗೃಹ ರಕ್ಷಕರಿಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹುಳಿಮಾವು ಕೆರೆ ದಂಡೆ ಒಡೆದಿರುವ ಪ್ರಕರಣ ಸಂಬಂಧ ಗೃಹರಕ್ಷಕರಾದ ನಾಗರಾಜ್ ಹಾಗೂ ಸಾಯಿನಾಥ್ ರೆಡ್ಡಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಬಿಬಿಎಂಪಿಯ ಮುಖ್ಯ ಎಂಜಿನಿಯರ್ ಬಿ.ಟಿ.ಮೋಹನ್ ಕೃಷ್ಣ ಅವರು ನೀಡಿದ್ದ ದೂರಿನಡಿ ತನಿಖೆ ಕೈಗೊಂಡು ಗೃಹ ರಕ್ಷಕರನ್ನು ಬಂಧಿಸಲಾಗಿತ್ತು. ಅವರು ಜಾಮೀನಿನ ಮೇಲೆ ಬಿಡುಗಡೆ
ಗೊಂಡಿದ್ದಾರೆ.

‘ಕೆರೆ ಬಳಿ ಗೃಹರಕ್ಷಕರನ್ನು ನೇಮಿಸಲಾಗಿತ್ತು. ಒಳ ಹರಿವು ಹೆಚ್ಚಾದಾಗ ಕೋಡಿ ಜಾಗದಲ್ಲಿ, ಜೆಸಿಬಿ ತರಿಸಿದ್ದರು. ಚಾಲಕ ಹೆಚ್ಚಿನ ಪ್ರಮಾಣದಲ್ಲಿ ಕಾಲುವೆ ಮಾಡಿದ್ದರಿಂದ ದಂಡೆ ಒಡೆದಿತ್ತು’ ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು