ಬೆಂಗಳೂರು: ಇಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂಬಿ) ತನ್ನ ಕ್ಯಾಂಪಸ್ನಲ್ಲಿ ಪರಿಸರಸ್ನೇಹಿ ಪ್ರಯಾಣಕ್ಕಾಗಿ ವಿದ್ಯುತ್ ಚಾಲಿತ (ಇವಿ) ಬಸ್ಗೆ ಚಾಲನೆ ನೀಡಿದೆ.

ನ್ಯಾಷನಲ್ ಇ-ಗವರ್ನೆನ್ಸ್ ಸರ್ವೀಸಸ್ ಲಿಮಿಟೆಡ್ (ಎನ್ಇಎಸ್ಎಲ್) ಸಹಯೋಗದಲ್ಲಿ ವಿದ್ಯುತ್ ಚಾಲಿತ ಬಸ್ ಕಾರ್ಯಾಚರಣೆ ಪ್ರಾರಂಭಿಸಿದೆ.

‘ವಿದ್ಯುತ್ ಚಾಲಿತ ಬಸ್ಗಳು ಪರಿಸರ ಸ್ನೇಹಿ ಮಾತ್ರವಲ್ಲದೆ, ಇಂಧನ ದಹಿಸುವ ವಾಹನಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿಯೂ ಕಾರ್ಯಾಚರಣೆ ಮಾಡಲಿದೆ. ಕ್ಯಾಂಪಸ್ನ ಪರಿಸರ ಸ್ನೇಹಿ ವ್ಯವಸ್ಥೆಯನ್ನು ಬಲಪಡಿಸಲು ಇವು ಸಹಕಾರಿ. ವೇಗದ ಚಾರ್ಜಿಂಗ್ ಇವಿ ಕೇಂದ್ರಗಳು ಮತ್ತು ಸೌರ ಫಲಕಗಳ ಸ್ಥಾಪನೆಯಂತಹ ಯೋಜನೆಗಳನ್ನು ಎನ್ಇಎಸ್ಎಲ್ ಬೆಂಬಲಿಸುತ್ತಿದೆ’ ಎಂದು ಎನ್ಇಎಸ್ಎಲ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೇಬಜ್ಯೋತಿ ರೇ ಚೌಧರಿ ತಿಳಿಸಿದರು.

ಎನ್ಇಎಸ್ಎಲ್ನ ಕಾರ್ಯನಿರ್ವಾಹಕ ನಿರ್ದೇಶಕಿ ನಿವೇದಿತಾ ಇ.ಪಿ., ಕೆನರಾ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಭವೇಂದ್ರ ಕುಮಾರ್, ಐಐಎಂಬಿಯ ಉಸ್ತುವಾರಿ ನಿರ್ದೇಶಕ ಪ್ರೊ.ಯು. ದಿನೇಶ್ ಕುಮಾರ್, ಉತ್ಪಾದನೆ ಮತ್ತು ಕಾರ್ಯಾಚರಣೆ ನಿರ್ವಹಣೆ ವಿಭಾಗದ ಅಧ್ಯಕ್ಷ ಪ್ರೊ. ಹರಿತಾ ಸಾರಂಗ, ಆಡಳಿತ ವಿಭಾಗದ ಡೀನ್ ಪ್ರೊ.ಎಂ. ಜಯದೇವ್ ಮತ್ತು ಐಐಎಂಬಿ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಹಿತ್ ಜೈಸಿಂಗ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.