ನೋಂದಣಿ ಕಡ್ಡಾಯ:
‘ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಸಂಸ್ಥೆಗಳು, ಕಂಪನಿಗಳು, ಸ್ವಯಂ ಸೇವಾ ಸಂಸ್ಥೆಗಳು, ಡಯಾಗ್ನಸ್ಟಿಕ್ ಕೇಂದ್ರಗಳು ತಮ್ಮಲ್ಲಿರುವ ವಿದೇಶಿ ಪ್ರಜೆಗಳು, ಯಾವ ಉದ್ದೇಶದಿಂದ ಇದ್ದಾರೆ. ಅವರ ಕೆಲಸಗಳು ಏನು? ಅಧ್ಯಯನ, ಸಂಶೋಧನೆ ನಡೆಸುತ್ತಿದ್ದರೆ ಅಂತಹವರ ಮಾಹಿತಿಯನ್ನು ಪೊಲೀಸರಿಗೆ ಒದಗಿಸುವುದನ್ನು ಕಡ್ಡಾಯ ಮಾಡಲಾಗಿದೆ’ ಎಂದು ಗುಪ್ತಚರ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.