ಬೆಂಗಳೂರು: ಮಂಗಳವಾರ ಸ್ವಾತಂತ್ರ್ಯೋತ್ಸವ ಪ್ರಯುಕ್ತ ರಜೆ ಇರುವುದರಿಂದ ಸೋಮವಾರವನ್ನು ಅದಕ್ಕೆ ಜೋಡಿಸಿಕೊಂಡು ಸಾಲು ರಜೆ ಹಾಕಿ ಪ್ರವಾಸ, ಊರಿಗೆ ಹೋಗುವವರಿಗೆ ಖಾಸಗಿ ಬಸ್‌ಗಳ ದರ ದುಬಾರಿ ಆಗಿದೆ.
ಶನಿವಾರ, ಭಾನುವಾರ ವಾರದ ರಜೆಗಳಾದರೆ ಮಂಗಳವಾರ ಸ್ವಾತಂತ್ರ್ಯೋತ್ಸವದ ರಜೆ. ಸೋಮವಾರ ಒಂದು ರಜೆ ಹಾಕಿದರೆ ನಾಲ್ಕು ರಜೆಗಳನ್ನು ಒಮ್ಮೆಲೆ ಪಡೆಯಬಹುದು ಎಂದು ಅನೇಕರು ರಜೆ ಹಾಕಿದ್ದಾರೆ. ಆದರೆ, ಶುಕ್ರವಾರವೇ ಬಸ್‌ಗಳ ದರ ಎರಡರಿಂದ ಮೂರು ಪಟ್ಟು ಹೆಚ್ಚಾಗಿದೆ.
ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವವರಿಗೆ ಖಾಸಗಿ ಬಸ್‌ಗಳಲ್ಲಿ ₹ 700ರಿಂದ ₹ 1,000ವರೆಗೆ ಇದ್ದ ದರ ಈಗ ₹ 1850ರಿಂದ ₹ 3,500ರವರೆಗೆ ಏರಿಕೆಯಾಗಿದೆ. ಮಂಗಳೂರಿಗೆ ₹ 700ರಿಂದ ₹ 950ರವರೆಗೆ ಇದ್ದಿದ್ದು ₹ 1400–₹ 2000ಕ್ಕೇರಿದೆ.
ಶಿರಸಿಗೆ ₹ 700–₹ 900 ಇದ್ದಿದ್ದು ₹ 1850–₹ 2,150ರವರೆಗೆ ಹೆಚ್ಚಳವಾಗಿದೆ. ಇದೇ ರೀತಿ ರಾಜ್ಯದ ವಿವಿಧ ನಗರಗಳಿಗೆ ತೆರಳುವವರಿಗೆ ಬಸ್ ದರ ಹೊರೆಯಾಗಿದೆ.
ಕೆಎಸ್‌ಆರ್‌ಟಿಸಿ ಭರ್ತಿ: ಖಾಸಗಿ ಬಸ್‌ಗಳಲ್ಲಿ ದರ ಏರಿಕೆಯಾಗಿರುವುದರಿಂದ ಕೆಎಸ್ಆರ್‌ಟಿಸಿಯ ಬಸ್‌ಗಳಲ್ಲಿ ಸೀಟ್‌ಗಳು ಭರ್ತಿಯಾಗಿವೆ. ವಿಶೇಷ ಬಸ್‌ಗಳಲ್ಲಿಯೂ ಸೀಟ್ ಇಲ್ಲದಂತಾಗಿದೆ. ಶನಿವಾರವೂ ಬಹುತೇಕ ಬಸ್‌ಗಳಲ್ಲಿ ಸೀಟ್ ಭರ್ತಿಯಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.