ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜತೆಗಿನ ಬಾಂಧವ್ಯ ವೃದ್ಧಿಗೆ 650 ಕಂಪನಿಗಳ ಕೊಡುಗೆ: ಚಾರ್ಜೆ ಲಸಿನಾ

Last Updated 11 ಆಗಸ್ಟ್ 2022, 21:13 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿನ ಅಮೆರಿಕದ ಚಾರ್ಜೆ ಡಿ’ ಅ‍ಫೇರ್ಸ್ ಪೆಟ್ರೀಷಿಯಾ ಲಸಿನಾ ಅವರು ನಗರದಲ್ಲಿನ ವಾಣಿಜ್ಯೋದ್ಯಮ ನೇತಾರರು ಮತ್ತು ಉದ್ಯಮಿಗಳನ್ನು ಭೇಟಿ ಮಾಡಿ ಅಮೆರಿಕ-ಭಾರತದ ನಡುವಿನ ಸುಭದ್ರ ಆರ್ಥಿಕ ಮತ್ತು ವಾಣಿಜ್ಯ ಒಡನಾಟದ ಬಗ್ಗೆ ಸಂವಾದ ನಡೆಸಿದರು.

ಚಾರ್ಜೆ ಲಸಿನಾ ಅವರು ಸೆಪ್ಟಂಬರ್‌ 2021ರಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಅವರು ಬೆಂಗಳೂರಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ. 

ಚಾರ್ಜೆ ಅವರೊಂದಿಗೆ ಚೆನ್ನೈನ ಯು.ಎಸ್.ಕಾನ್ಸಲ್ ಜನರಲ್ ಜುಡಿತ್ ರೇವಿನ್ ಮತ್ತು ಯು.ಎಸ್.ನ್ಯಾಷನಲ್ ಸೈನ್ಸ್ ಫೌಂಡೇಷನ್(ಎನ್‌ಎಸ್‌ಎಫ್)ನ ನಿರ್ದೇಶಕ ಡಾ. ಸೇತುರಾಮನ್ ಪಂಚನಾಥನ್ ಉಪಸ್ಥಿತರಿದ್ದರು.

ವಾಣಿಜ್ಯ ಮತ್ತು ಉದ್ಯಮ ನಾಯಕರಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಚಾರ್ಜೆ ಲಸಿನಾ, ಬೆಂಗ ಳೂರಿನಲ್ಲಿರುವ 650ಕ್ಕೂ ಹೆಚ್ಚು ಅಮೆರಿಕ ಕಂಪನಿಗಳ ಕೊಡುಗೆ ಸ್ಮರಿಸಿದರು. ಹತ್ತಾರು ಸಾವಿರ ಭಾರತದ ನಾಗರಿಕರಿಗೆ ಔಪಚಾರಿಕ ವಲಯದಲ್ಲಿ ಉನ್ನತ ಗುಣಮಟ್ಟದ ಉದ್ಯೋಗ ನೀಡಿರುವ ಕಂಪನಿಗಳು ಇವು. ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆಯ ಕೆಲಸಗಳ ಮೂಲಕ ಹಾಗೂ ಉದ್ಯೋಗಿಗಳ ಕೌಶಲ ಅಭಿವೃದ್ಧಿಗೆ ಬದ್ಧತೆಯ ಮೂಲಕ ನೀಡು ತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT