ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಟಿಗ್ರೇಟೆಡ್ ಬಿ.ಇಡಿ ಇಂದಿನ ಅಗತ್ಯ’

Last Updated 30 ಜುಲೈ 2018, 16:01 IST
ಅಕ್ಷರ ಗಾತ್ರ

ಬೆಂಗಳೂರು: ‘40 ವರ್ಷ ಬೋಧನೆ ಮಾಡುವ ಶಿಕ್ಷಕರಿಗೆಸಮಗ್ರ ಬಿ.ಎಡ್‌ ಶಿಕ್ಷಣ ದೊರೆಯುವ ಅಗತ್ಯವಿದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಕೆ.ಆರ್‌.ವೇಣುಗೋಪಾಲ್‌ ಅಭಿಪ್ರಾಯಪಟ್ಟರು.

ಡಾ.ಅಂಬೇಡ್ಕರ್‌ ಶಿಕ್ಷಣ ಕಾಲೇಜು ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಬೋಧನೆಯ ಗುಣಮಟ್ಟ ಹೆಚ್ಚುವುದಕ್ಕೆ ಶಿಕ್ಷಕರ ಶಿಕ್ಷಣದ ಮಾದರಿಯೂ ಬದಲಾಗಬೇಕು ಎಂಬುದು ಎಲ್ಲರೂ ಒಪ್ಪುವ ನಿಲುವು. 2015ರಲ್ಲಿಯೇ ಎರಡು ವರ್ಷಗಳ ಬಿ.ಎಡ್‌ ಕೋರ್ಸ್‌ ಪರಿಚಯಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಉದ್ದೇಶಿಸಲಾಗಿರುವ ನಾಲ್ಕು ವರ್ಷದ ಬಿ.ಎಡ್‌ ಸಮಗ್ರ ಶಿಕ್ಷಣದ ಕೋರ್ಸ್‌ ಇಂದಿನ ಅಗತ್ಯ’ ಎಂದು ಹೇಳಿದರು.

ಶಿಕ್ಷಣತಜ್ಞ ಡಾ.ಎಂ.ಎಸ್.ತಳವಾರ್, ‘ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗುವ ಗುಣಾತ್ಮಕ ಶಿಕ್ಷಣ ನೀಡುವ ಅಗತ್ಯತೆ ಇದೆ. ಇದಕ್ಕೆ ಇಂಟಿಗ್ರೇಟೆಡ್ ಬಿ.ಇಡಿ ತರಬೇತಿ ಅಗತ್ಯವಿದೆ. ಇದರಿಂದ ಶಾಲಾ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯತೆ ಇದೆ’ ಎಂದು ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಗೃಹವಿಜ್ಞಾನ, ಎಂಜಿನಿಯರಿಂಗ್, ಎಂಬಿಬಿಎಸ್ ಮತ್ತಿತರ ಕೋರ್ಸ್‌ಗಳನ್ನು ಪೂರ್ಣಗೊಳಿಸಿರುವ ವಿದ್ಯಾರ್ಥಿಗಳೂ ಬಿ.ಇಡಿ ಕೋರ್ಸ್‌ಗೆ ದಾಖಲಾತಿ ಪಡೆಯುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದ್ದು, ಅದಕ್ಕನುಗುಣವಾಗಿ ಈ ತರಬೇತಿ ಕಾರ್ಯಕ್ರಮವನ್ನು ಮಾರ್ಪಡಿಸಬೇಕಾದ ಅಗತ್ಯವಿದೆ’ ಎಂದರು.

‘ಸದ್ಯ ಬೋಧಕರ ಶಿಕ್ಷಣ ವ್ಯವಸ್ಥೆಯಲ್ಲಿ ಬಳಸುತ್ತಿರುವ ಪಠ್ಯಕ್ರಮ, ಬೋಧನಾ ವಿಧಾನಗಳು ಇಂದಿನ ನೈಜ ಅಗತ್ಯವನ್ನು ಪರಿಗಣಿಸದೆ, ದಶಕಗಳ ಹಿಂದಿನ ಪದ್ಧತಿಯನ್ನೇ ಅನುಸರಿಸುತ್ತಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT