‘ಜನರ ಜಾತಿ, ಧರ್ಮ, ಲಿಂಗ ಹಾಗೂ ದೈಹಿಕ ನ್ಯೂನತೆಗಳ ಆಧಾರದಲ್ಲಿ ತಾರತಮ್ಯ ಮಾಡದೆ ನಗರದ ಎಲ್ಲ ಜನರನ್ನು ರಕ್ಷಿಸುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಇಲಾಖೆ ನೀಡುವ ಮಾಹಿತಿಗಳು ಎಲ್ಲ ವರ್ಗದ ಜನರನ್ನು ತಲುಪಬೇಕು. ಆ ನಿಟ್ಟಿನಲ್ಲಿ ಎಲ್ಲ ವರ್ಗಗಳ ಜನರ ಅಹವಾಲುಗಳನ್ನು ಅರ್ಥೈಸಿಕೊಳ್ಳುವುದು ಹಾಗೂ ಸಂವಹನ ಸಾಧಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಸಂಜ್ಞಾ ಭಾಷಾ ದಿನದ (ಸೆಪ್ಟೆಂಬರ್ 23) ಕಾರಣ ಈ ಪ್ರಯತ್ನ ಮಾಡಲಾಗಿದೆ’ ಎಂದು ದಯಾನಂದ ಹೇಳಿದರು.