ಭಾನುವಾರ, ಏಪ್ರಿಲ್ 5, 2020
19 °C

ಬಿಐಸಿ: ಇಂದು ಮಹಿಳಾ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವ ಮಹಿಳಾ ದಿನದ ಅಂಗವಾಗಿ ಮಾರ್ಚ್‌ 8 ರಂದು ಬೆಳಿಗ್ಗೆ 10.30ರಿಂದ ರಾತ್ರಿ 9ರ ವರೆಗೆ ದೊಮ್ಮಲೂರಿನ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಕಾರ್ಯಕ್ರಮಗಳು ನಡೆಯಲಿವೆ. 

ವಚನಗಳನ್ನು ಹಾಡುವ ಮೂಲಕ ಗಾಯಕಿ ಎಂ.ಡಿ.ಪಲ್ಲವಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿ‌ದ್ದಾರೆ. ‘ಪುರುಷನೂ ಅಳುತ್ತಾನೆ’, ‘20ನೇ ಶತಮಾನದಲ್ಲಿ ಭಾರತದ ಮುಸ್ಲಿಂ ಮಹಿಳೆಯರು’, ‘ನಮ್ಮ ನಡೆ ಸಮಾನತೆ ಕಡೆಗೆ’ ವಿಷಯ ಕುರಿತಂತೆ ತಜ್ಞರು ಚರ್ಚೆ ನಡೆಸಲಿದ್ದಾರೆ. 

‘ಪುರುಷತ್ವ ವಿಷಯವೇ ಬಿಕ್ಕಟ್ಟಿನಲ್ಲಿದೆಯೇ’ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಮಹಿಳೆಯರ ಕುರಿತ ವಿಭಿನ್ನ ಕಥಾ ಹಂದರವುಳ್ಳ ಚಲನಚಿತ್ರಗಳ ಪ್ರದರ್ಶನಗಳು ಇರಲಿವೆ. ಕಾವ್ಯವಾಚನ, ಛಾಯಾಚಿತ್ರ ಪ್ರದರ್ಶನವೂ ನಡೆಯಲಿದೆ. ಉಚಿತ ಪ್ರವೇಶವಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು