ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಬಳಾಪುರದಲ್ಲಿ ಜಾತ್ರಾ ಮಹೋತ್ಸವ ಮೇ 1ರಂದು

Published 28 ಏಪ್ರಿಲ್ 2024, 15:42 IST
Last Updated 28 ಏಪ್ರಿಲ್ 2024, 15:42 IST
ಅಕ್ಷರ ಗಾತ್ರ

ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕು ತ್ಯಾಮಗೊಂಡ್ಲು ಹೋಬಳಿ ಓಬಳಾಪುರ ಗ್ರಾಮದ ಗಂಗಸಂದ್ರಮ್ಮ ದೇವಿ ಮತ್ತು ಗ್ರಾಮ ದೇವತೆ ಜಾತ್ರಾ ಮಹೋತ್ಸವ ಭಾನುವಾರದಿಂದ ಆರಂಭವಾಗಿದ್ದು, ಮೇ 1 ಬುಧವಾರದವರೆಗೆ ನಡೆಯಲಿದೆ.

ಭಾನುವಾರ ಮತ್ತು ಸೋಮವಾರ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿವೆ. ರಾತ್ರಿ 8.30ಕ್ಕೆ ಕಲಾವಿದರಿಂದ ‘ಕುರುಕ್ಷೇತ್ರ ನಾಟಕ‘ ‍ಪ್ರದರ್ಶನವಿದೆ.

ಏ.30ರಂದು ಮಧ್ಯಾಹ್ನ 1.30 ಗಂಟೆಗೆ ಗಂಗಸಂದ್ರಮ್ಮ ದೇವಿಯ ರಥೋತ್ಸವ ನಡೆಯಲಿದೆ. ಅಂದು ಸಂಜೆ 6ಕ್ಕೆ ದೇವಿಯ ಬೆಳ್ಳಿಪಲ್ಲಕ್ಕಿ ಉತ್ಸವ ಹಾಗೂ ವೀರಗಾಸೆ ಕುಣಿತ ನಡೆಯಲಿದೆ.

ಮೇ 1ರ ಬೆಳಗಿನ ಜಾವ 5ಕ್ಕೆ ಹಾಗೂ ಮಧ್ಯಾಹ್ನ 1ಕ್ಕೆ ಗ್ರಾಮ ದೇವತೆಗೆ ಉಪಾರ, 4ಕ್ಕೆ ಆರತಿ ನಡೆದು 9.30ಕ್ಕೆ ಗ್ರಾಮದೇವತೆಯ ವಿಸರ್ಜನೆ ನಡೆಯಲಿದೆ ಎಂದು ಧಾರ್ಮಿಕ ಚಿಂತಕ ಕೃಷ್ಣ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT