ಬುಧವಾರ, ಆಗಸ್ಟ್ 21, 2019
22 °C

ಕಂಪನಿ ಎಚ್‌.ಆರ್‌ ಮೇಲೆ ಲೈಂಗಿಕ ದೌರ್ಜನ್ಯ

Published:
Updated:

ಬೆಂಗಳೂರು: ಜೀವನ್‌ಬಿಮಾ ನಗರದಲ್ಲಿರುವ ಕಂಪನಿಯೊಂದರ ಮಾನವ ಸಂಪನ್ಮೂಲ ಅಧಿಕಾರಿ (ಎಚ್‌.ಆರ್‌) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಉದಯ್‌ಕುಮಾರ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಎಚ್‌.ಆರ್‌ ಆಗಿರುವ 28 ವರ್ಷದ ಯುವತಿ ನೀಡಿರುವ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಜೀವನ್‌ಬಿಮಾ ನಗರ ಪೊಲೀಸರು ಹೇಳಿದರು.

ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಆರೋಪಿ, ಮಾರ್ಚ್‌ 5ರಂದು ತನ್ನನ್ನು ಸಂಪರ್ಕಿಸಿದ್ದ. ಆತನ ವಿದ್ಯಾಭ್ಯಾಸಕ್ಕೆ ತಕ್ಕಂತೆ ಕಂಪನಿಯಲ್ಲೇ ಕೆಲಸ ಸಿಕ್ಕಿತ್ತು. ಮಾರ್ಚ್‌ 20ರಂದು ಕೆಲಸಕ್ಕೆ ಸೇರಿದ್ದ ಆರೋಪಿ, ವೇತನ ತೃಪ್ತಿಕರವಾಗಿಲ್ಲವೆಂದು ಜಗಳ ತೆಗೆಯಲಾರಂಭಿಸಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. .

‘ಯುವತಿ ಜೊತೆಗೂ ಮೇಲಿಂದ ಮೇಲೆ ಅಸಭ್ಯವಾಗಿ ವರ್ತಿಸಲಾರಂಭಿಸಿದ್ದ. ಜುಲೈ 31ರಂದು ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದ ಆರೋಪಿ, ‘ನೀವು ಒಳ್ಳೆಯ ವೇತನ ನೀಡುತ್ತಿಲ್ಲ’ ಎಂದು ಕೂಗಾಡಿದ್ದ. ಯುವತಿ ಫೋಟೊ ಕ್ಲಿಕ್ಕಿಸಿಕೊಂಡಿದ್ದ. ಅದನ್ನು ಪ್ರಶ್ನಿಸಿದ್ದಕ್ಕೆ ಜೀವ ಬೆದರಿಕೆ ಸಹ ಹಾಕಿದ್ದ’ ಎಂದು ದೂರಿನಲ್ಲಿ ವಿವರಿಸಲಾಗಿದೆ.

‘ಕೆಲ ದಿನಗಳ ನಂತರ, ಯುವತಿಯ ಫೋಟೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ. ಕೆಟ್ಟದಾಗಿ ಕಾಮೆಂಟ್ ಪ್ರಕಟಿಸಿ, ಯುವತಿಯ ಗೌರವಕ್ಕೆ ಧಕ್ಕೆ ತಂದಿದ್ದಾನೆ’ ಎಂದು ಪೊಲೀಸರು ತಿಳಿಸಿದರು. 

Post Comments (+)