ಮಂಗಳವಾರ, ನವೆಂಬರ್ 12, 2019
24 °C

ಔ‌ರಾದಕರ ವರದಿ: ಜೆಡಿಎಸ್‌ನಿಂದಲೇ ಕ್ರಮ

Published:
Updated:
Prajavani

ಬೆಂಗಳೂರು: ಪೊಲೀಸ್‌ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಔರಾದಕರ ವರದಿಯಂತೆ ತಾತ್ಕಾಲಿಕ ವೇತನ ಪರಿಷ್ಕರಣೆಯನ್ನು ಮೈತ್ರಿ ಸರ್ಕಾರವೇ ಜಾರಿಗೆ ತಂದಿತ್ತು ಎಂದು ಜೆಡಿಎಸ್‌ ಹೇಳಿಕೊಂಡಿದೆ.

‘ಎಚ್‌. ಡಿ. ಕುಮಾರಸ್ವಾಮಿ ಅವರೇ ಔರಾದಕರ ವರದಿಯನ್ನು ಜುಲೈ 15ರಂದು ಭಾಗಶಃ ಜಾರಿಗೆ ತಂದಿದ್ದರು. ಪೊಲೀಸರ ಬಗೆಗೆ ಕುಮಾರಸ್ವಾಮಿ ಅವರಿಗೆ ಇದ್ದ ಕಾಳಜಿಗೆ ಇದು ಸಾಕ್ಷಿ. ರಾಜಕೀಯ ಕಾರಣಕ್ಕಾಗಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ವರದಿಯನ್ನು ತಡೆಹಿಡಿದಿದ್ದರು’ ಎಂದು ಪಕ್ಷದ ರಾಷ್ಟ್ರೀಯ ವಕ್ತಾರ ರಮೇಶ್‌ ಬಾಬು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)