ಶನಿವಾರ, ಫೆಬ್ರವರಿ 27, 2021
30 °C

ಯಹೂದಿ ಹತ್ಯಾಕಾಂಡ ಸ್ಮರಣೆ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಸ್ರೇಲ್‌ ಕಾನ್ಸಲ್ ಜನರಲ್‌ ಕಚೇರಿ ನಗರದಲ್ಲಿ ಬುಧವಾರ ಅಂತರರಾಷ್ಟ್ರೀಯ ಹತ್ಯಾಕಾಂಡದ ದಿನದ ಸ್ಮರಣೆಯ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇಸ್ರೇಲ್‌ನ ದಕ್ಷಿಣ ಭಾರತದ ಕಾನ್ಸಲ್‌ ಜನರಲ್‌ ಮುಖ್ಯಸ್ಥ ಜೋನಾಥನ್‌ ಝಡ್ಕ ಮಾತನಾಡಿ, ದೇಷ, ಜನಾಂಗೀಯ ತಾರತಮ್ಯದಿಂದ ಮನುಕುಲಕ್ಕೆ ಹಾನಿಯೇ ಹೊರತು ಒಳಿತಾಗುವುದಿಲ್ಲ.  ಎರಡನೇ ವಿಶ್ವ ಯುದ್ಧದ ಸಂದರ್ಭ ಜರ್ಮನಿಯಲ್ಲಿ ನಡೆದ ಯಹೂದಿಗಳ ನರಮೇಧ ಈ ಪಾಠವನ್ನು ಜಗತ್ತಿಗೆ ಸಾರುತ್ತದೆ. ಭವಿಷ್ಯದಲ್ಲಿ ಎಂದೂ ಇಂತಹ ಸ್ಥಿತಿ ಬಾರದಂತೆ ಒಗ್ಗಟ್ಟಾಗಿ ಹೋರಾಡಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ಅಮೆರಿಕ, ಯುಕೆ, ಜರ್ಮನಿ, ಫ್ರಾನ್ಸ್‌, ಸ್ವಿಡ್ಜರ್‌ಲ್ಯಾಂಡ್‌, ಜಪಾನ್‌ ಮುಂತಾದ
ರಾಷ್ಟ್ರಗಳ ರಾಯಭಾರಿ ಕಚೇರಿಗಳ ಮುಖ್ಯಸ್ಥರು. ವಿವಿಧ ಧರ್ಮಗಳ ಮುಖಂಡರು ಮೇಣದ ಬತ್ತಿ ಬೆಳಗಿದರು. ಹತ್ಯಾಕಾಂಡದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಯಹೂದಿ ಧರ್ಮ ಗುರು ಪ್ರಾರ್ಥನೆ ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು