ಬುಧವಾರ, ಫೆಬ್ರವರಿ 19, 2020
30 °C

‘ಜಿಹಾದಿ’ ತಂಡದ ಬಂಧನ: ತನಿಖೆ ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಕ್ಷಿಣ ಭಾರತದ ರಾಜ್ಯಗಳಲ್ಲಿ ಐಎಸ್ (ಇಸ್ಲಾಮಿಕ್‌ ಸ್ಟೇಟ್‌) ಉಗ್ರ ಸಂಘಟನೆ ಬಲಪಡಿಸಲು ಸಿದ್ಧತೆ ನಡೆಸುತ್ತಿದ್ದ ‘ಜಿಹಾದಿ’ ತಂಡದ ಬಂಧನ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪ್ರತ್ಯೇಕ ಎಫ್‌ಐಆರ್ ದಾಖಲಿಸಿ, ತನಿಖೆ ಚುರುಕುಗೊಳಿಸಿದೆ.

ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಸಿಬಿ ಉಗ್ರ ನಿಗ್ರಹ ದಳದಿಂದ (ಎಟಿಸಿ) ಎನ್‌ಐಎಗೆ ವಹಿಸಲಾಗಿದೆ. ಸಿಸಿಬಿಯಿಂದ ಕಡತಗಳನ್ನು ವಶಕ್ಕೆ ಪಡೆದಿರುವ ಎನ್‌ಐಎ ಅಧಿಕಾರಿಗಳು, ಜಿಹಾದಿ ತಂಡದ ವಿರುದ್ಧ ಜ. 23ರಂದು ಪ್ರತ್ಯೇಕ ಎಫ್‌ಐಆರ್ ದಾಖಲಿಸಿದೆ. ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ 17 ಮಂದಿ ಶಂಕಿತ ಉಗ್ರರ ಹೆಸರಿದೆ. ಈ ಪೈಕಿ, ಮೆಹಬೂಬ್ ಪಾಷಾ ಸೇರಿ ದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಐಎಸ್ ಸಂಘಟನೆಗೆ ಹೊಸ ಸದಸ್ಯರ ನೇಮಕಾತಿ ಮತ್ತು ತರಬೇತಿಗೆ ತಮಿಳುನಾಡಿನ ಶಂಕಿತ ಉಗ್ರ ಖಾಜಾ ಮೊಹಿದ್ದೀನ್ ತಯಾರಿ ನಡೆಸಿದ್ದ. ಜಿಹಾದಿ ಗ್ಯಾಂಗ್ ಕಟ್ಟಿ ಮೆಹಬೂಬ್ ಪಾಷ ಸೇರಿ ಕೆಲವರಿಗೆ ಸಂಘಟನೆ ಹೊಣೆ ವಹಿಸಿದ್ದ ಎನ್ನಲಾಗಿದೆ. ತಮಿಳುನಾಡು ಪೊಲೀಸರು ಬೆಂಗಳೂರಿನಲ್ಲಿ ಮೂವರ ಬಂಧಿಸುತ್ತಿದ್ದಂತೆ ಮೆಹಬೂಬ್ ಪಾಷಾ, ಸಹಚರರು ತಲೆಮರೆಸಿಕೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು