ಬೆಂಗಳೂರು: ಜಿಯೊ ಟವರ್ ಅಳವಡಿಸುವ ಆಮಿಷವೊಡ್ಡಿ ನಾನಾ ಶುಲ್ಕದ ಹೆಸರಿನಲ್ಲಿ ನಗರದ ನಿವಾಸಿಯೊಬ್ಬರಿಂದ ₹ 2.21 ಲಕ್ಷ ಪಡೆದು ವಂಚಿಸಲಾಗಿದೆ.

ವಸಂತನಗರದ 71 ವರ್ಷದ ವೃದ್ಧರೊಬ್ಬರು ವಂಚನೆ ಬಗ್ಗೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

‘ದೂರುದಾರರ ಮೊಬೈಲ್ಗೆ ಸಂದೇಶ ಕಳುಹಿಸಿದ್ದ ಆರೋಪಿ, ‘ಬೆಂಗಳೂರಿನಲ್ಲಿ ಜಿಯೊ ಟವರ್ ಅಳವಡಿಸಲಾಗುತ್ತಿದೆ. ಖಾಲಿ ಜಾಗ ನೀಡಿದರೆ ಪ್ರತಿ ತಿಂಗಳು ₹ 50,000 ಬಾಡಿಗೆ ನೀಡಲಾಗುವುದು. ಜೊತೆಗೆ, ಮುಂಗಡ ಠೇವಣಿ ₹ 60 ಲಕ್ಷ ಕೊಡಲಾಗುವುದು’ ಎಂದಿದ್ದ. ಅದನ್ನು ನಂಬಿದ್ದ ದೂರುದಾರ ಆರೋಪಿಯನ್ನು ಸಂಪರ್ಕಿಸಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಟವರ್ ಅಳವಡಿಕೆ ಪ್ರಕ್ರಿಯೆ ಆರಂಭಿಸಲು ಆಧಾರ್, ಚುನಾವಣಾ ಗುರುತಿನ ಚೀಟಿ, ಜಾಗದ ಪತ್ರ ಕಳುಹಿಸುವಂತೆ ಆರೋಪಿ ಹೇಳಿದ್ದ. ದೂರುದಾರ ಎಲ್ಲ ಪ್ರತಿಗಳನ್ನು ಕಳುಹಿಸಿದ್ದರು. ಅದಾದ ಬಳಿಕವೂ ಆರೋಪಿ ಅರ್ಜಿ ಭರ್ತಿ ಹಾಗೂ ನೋಂದಣಿ ಶುಲ್ಕ ಕೇಳಿದ್ದ. ಅದನ್ನೂ ನಂಬಿದ್ದ ದೂರುದಾರ ಆರೋಪಿ ಹೇಳಿದ್ದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ₹ 2.21 ಲಕ್ಷ ಜಮೆ ಮಾಡಿದ್ದರು.’

‘ಹಣ ಪಡೆದ ನಂತರ ಆರೋಪಿ ನಾಪತ್ತೆಯಾಗಿದ್ದಾನೆ. ಆತನ ಮೊಬೈಲ್ ಸಹ ಸ್ವಿಚ್ ಆಫ್ ಮಾಡಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.