ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಸಿ. ವ್ಯಾಲಿ ಯೋಜನೆಗೆ ಹೆಚ್ಚುವರಿ ನೀರು

Last Updated 15 ಜುಲೈ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು:‘ಕೆ.ಸಿ. ವ್ಯಾಲಿ ಯೋಜನೆಯಲ್ಲಿ ಈಗ ದಿನಕ್ಕೆ 4 ಕೋಟಿ ಲೀಟರ್‌ ನೀರನ್ನು ಹೆಚ್ಚುವರಿಯಾಗಿ ಸರಬರಾಜು ಮಾಡಲಾಗುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

‘ಈ ಹಿಂದೆ ದಿನಕ್ಕೆ 25 ಕೋಟಿ ಲೀಟರ್‌ ನೀರನ್ನು ಪಂಪ್‌ ಮಾಡಲಾಗುತ್ತಿತ್ತು. ಈಗ ಈ ಪ್ರಮಾಣವನ್ನು 29 ಕೋಟಿ ಲೀಟರ್‌ಗೆ ಹೆಚ್ಚಿಸಲಾಗಿದೆ. ಮುಂದಿನ 10 ದಿನಗಳಲ್ಲಿ ಈ ಹೆಚ್ಚುವರಿ ನೀರನ್ನು ಸರಬರಾಜು ಮಾಡಲಾಗುವುದು. ಜಲಮಂಡಳಿ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರವಾಗಿ ನಡೆಸಿದ ಚರ್ಚೆಯ ಫಲವಾಗಿ ಇದು ಸಾಧ್ಯವಾಗಿದೆ’ ಎಂದು ಸಚಿವರು ತಿಳಿಸಿದರು.

‘ಹೆಚ್ಚುವರಿಯಾಗಿ ಪಂಪ್‌ ಮಾಡುತ್ತಿರುವ ನೀರಿನಲ್ಲಿ 1 ಕೋಟಿ ಲೀಟರ್‌ ನೀರನ್ನು ಹೊಸಕೋಟೆ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲಾಗುತ್ತದೆ. 2 ಕೋಟಿ ಲೀಟರ್‌ ನೀರನ್ನು ಮಾಲೂರಿನ ವ್ಯಾಪ್ತಿಯ ಕೆರೆಗಳನ್ನು ತುಂಬಿಸಲಾಗುತ್ತದೆ. ಈ ಎರಡೂ ಕೊಳವೆಮಾರ್ಗಗಳಿಗೆ ನೀರು ಸರಬರಾಜು ಆರಂಭವಾಗಿದ್ದು, ಮುಖ್ಯ ಸರಣಿಯಲ್ಲಿ (ನರಸಾಪುರ–ಎಸ್‌ ಅಗ್ರಹಾರ–ಜನಘಟ್ಟ–ಬಂಗಾರಪೇಟೆ) ಕೂಡ 1 ಕೋಟಿ ಲೀಟರ್‌ ಹೆಚ್ಚುವರಿ ನೀರು ಹರಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT