ಶನಿವಾರ, ಆಗಸ್ಟ್ 13, 2022
23 °C

‘ಸಮಾಜದ ಒಳಿತಿನ ಸಂಘಗಳು ವಿರಳ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸಮಾಜದ ಹೆಸರಿನಲ್ಲಿ ಸ್ವಂತ ಉಪಯೋಗದ ಸಂಘಟನೆಗಳು ಹೆಚ್ಚಾಗಿ ನಿರ್ಮಾಣವಾಗಿದ್ದು, ತಮ್ಮ ಏಳಿಗೆಗೆ ಮಾತ್ರ ಸೀಮಿತವಾಗಿದೆ. ಆದರೆ, ಸಮಾಜದ ಒಳಿತಿಗೆ ಶ್ರಮಿಸುವ ಸಂಘಗಳು ಅತಿ ವಿರಳ’ ಎಂದು ಕಾಗಿನೆಲೆ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ ತಿಳಿಸಿದರು.

ಕಾಳಿದಾಸ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಘವು ಭಾನುವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

‘ಹತ್ತು ಮಂದಿ ಸೇರಿ ಒಂದು ಸಂಘವು ಆಯವ್ಯಯ ಇಲ್ಲದೆ ಕಟ್ಟಿರುವ ಸಂಘ ಇದು. ಸಮಾಜಕ್ಕೆೆ ಒಳಿತು ಮಾಡುವ ಸಂಘಗಳು ಇರಬೇಕು. ಯಾವುದೇ ಸಮಾಜಕ್ಕೆ ನಾವು ಅನಿವಾರ್ಯವಾಗಬಾರದು, ಅವಶ್ಯಕವಾಗಿರಬೇಕು’ ಎಂದರು.

ಮುಜರಾಯಿ ಇಲಾಖೆ ಆಯುಕ್ತ ಕೆ.ಎ.ದಯಾನಂದ,‘ ಕಾಳಿದಾಸರ ಹೆಸರಿನಲ್ಲಿ ಕಟ್ಟಲಾಗಿರುವ ಈ ಸಂಘ, ಸಾಹಿತ್ಯ ವಿಷಯದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದೆ.  ಇಂತಹ ಸಂಘಗಳು ಪ್ರೇರಣೆ ನೀಡಿದ್ದರಿಂದ ಉನ್ನತ ಸ್ಥಾನ ಪಡೆಯಲು ಅನುಕೂಲವಾಯಿತು’ ಎಂದು ಹೇಳಿದರು.

ಆಯುರ್ವೇದ ಮಹಾವಿದ್ಯಾಲಯ ಸ್ಥಾಪನೆ: ’ಸಾಹಿತ್ಯ ಹಾಗೂ ಶೈಕ್ಷಣಿಕವಾಗಿ ಕೆಲ ಯೋಜನೆಗಳನ್ನು ಕೈಗೊಳ್ಳಲು ಸರ್ಕಾರದಿಂದ 4 ಎಕರೆ 30 ಗುಂಟೆ ಜಾಗವನ್ನು ಸಂಘ ಪಡೆದಿದ್ದು, ಇಲ್ಲಿ ಆಯುರ್ವೇದ ಮಹಾವಿದ್ಯಾಲಯ ಸ್ಥಾಪಿಸಲು ತೀರ್ಮಾನಿಸಲಾಗಿದೆ’ ಎಂದು ಕಾಳಿದಾಸ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಘದ ಅಧ್ಯಕ್ಷ ಬಿ.ದೇವರಾಜ ತಿಳಿಸಿದರು.

‘ಇದರ ಆವರಣದಲ್ಲಿ ಶಾಲಾ-ಕಾಲೇಜು, ಉದ್ಯಾನ, ಸಮುದಾಯ ಭವನ, ಗ್ರಂಥಾಲಯ ಹಾಗೂ ಆಸ್ಪತ್ರೆೆ ತೆರೆಯಲಾಗುತ್ತದೆ. ಆರೋಗ್ಯ ಮತ್ತು ಶೈಕ್ಷಣಿಕ ಅನುಕೂಲಕ್ಕಾಗಿ ಕೆಲವೊಂದು ಕಟ್ಟಡಗಳು ನಿರ್ಮಿಸಲಾಗುತ್ತಿದೆ. ಜ.15ರ ಬಳಿಕ ಇದಕ್ಕೆೆ ಅಧಿಕೃತವಾಗಿ ಚಾಲನೆ ನೀಡಲಾಗುವುದು’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು