ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮೇಗೌಡರ ಕಟ್ಟೆ: ಸತ್ಯಾಸತ್ಯತೆ ತಿಳಿಯಲು ತಜ್ಞರ ಸಮಿತಿ

Last Updated 17 ಜುಲೈ 2020, 15:35 IST
ಅಕ್ಷರ ಗಾತ್ರ

ಮಳವಳ್ಳಿ: ತಾಲ್ಲೂಕಿನ ಕುಂದನಿ ಬೆಟ್ಟದ ಮೇಲೆ ಕಲ್ಮನೆ ಕಾಮೇಗೌಡರು ಕಟ್ಟಿರುವ ಕಟ್ಟೆಗಳ ಸತ್ಯಾಸತ್ಯತೆ ತಿಳಿಯಲು ತಜ್ಞರ ಸಮಿತಿ ರಚನೆ ಮಾಡಲಾಗುವುದು. ಸಮಿತಿಯ ವರದಿಯ ಆಧಾರದ ಮೇಲೆ ಕಟ್ಟೆ ನಿರ್ಮಾಣ ನಿಜವೇ, ಸುಳ್ಳೇ ಎಂಬ ಬಗ್ಗೆ ನಿರ್ಧಾರ ಮಾಡಲಾಗುವುದು’ ಎಂದು ಉಪ ವಿಭಾಗಾಧಿಕಾರಿ ಸೂರಜ್‌ ಹೇಳಿದರು.

ದಾಸನದೊಡ್ಡಿ ಗ್ರಾಮಸ್ಥರು ಹಾಗೂ ಕಾಮೇಗೌಡರ ನಡುವೆ ಇರುವ ಭಿನ್ನಾಭಿಪ್ರಾಯ ಶಮನಗೊಳಿಸಲು ಶುಕ್ರವಾರ ಗ್ರಾಮದಲ್ಲಿ ನಡೆದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.

‘ಜುಲೈ 21ರೊಳಗೆ ಸಮಿತಿ ರಚನೆ ಮಾಡಿ ಆದಷ್ಟು ಬೇಗ ವರದಿ ಪಡೆಯಲಾಗುವುದು. ಸಮಿತಿಯಲ್ಲಿ ಭೂ ವಿಜ್ಞಾನಿಗಳು, ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು, ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಇಒ, ಪೊಲೀಸ್ ಅಧಿಕಾರಿಗಳು ಸ್ಥಾನ ಪಡೆಯಲಿದ್ದಾರೆ’ ಎಂದರು.

ಶಾಂತಿ ಸಭೆಯಲ್ಲಿ ಗ್ರಾಮಸ್ಥರು ಕಾಮೇಗೌಡರ ವಿರುದ್ದ ದೂರುಗಳ ಸುರಿಮಳೆಗೈದರು. ಕಾಮೇಗೌಡರಿಗೆ ಆನಾರೋಗ್ಯ ಇರುವ ಕಾರಣ ಅವರು ಸಭೆಯಲ್ಲಿ ಹಾಜರಾಗಿರಲಿಲ್ಲ.

‘ನಾನೇ ಸ್ಥಳಕ್ಕೆ ಭೇಟಿ ನೀಡಿ ಕಟ್ಟೆಗಳನ್ನು ಪರಿಶೀಲನೆ ನಡೆಸಿದ್ದೆ. ಆದರೆ, ಕಟ್ಟೆಗಳ ಬಗ್ಗೆ ಗ್ರಾಮಸ್ಥರಲ್ಲಿ ಸಾಕಷ್ಟು ಅನುಮಾನ ಇರುವುದರಿಂದ ಅದರ ಬಗ್ಗೆ ತಜ್ಞರಿಂದ ಒಂದು ವರದಿ ಪಡೆಯಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT