ಪ್ರಾಧಿಕಾರ ಹಮ್ಮಿಕೊಂಡಿದ್ದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಎಂಟಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ನಾಗಾಭರಣ ಅವರು, ‘ಚಾಲಕರು ಮತ್ತು ನಿರ್ವಾಹಕರ ಎದೆಬಿಲ್ಲೆ ಮತ್ತು ಭುಜಬಿಲ್ಲೆ ಕನ್ನಡದಲ್ಲಿರಬೇಕು. ಸೇವಾ ಸಿಂಧು ಕೇಂದ್ರಗಳಲ್ಲಿ ಅಂಧರು ಮತ್ತು ಅಂಗವಿಕಲರ ಪಾಸ್‌ಗಳಿಗೆ ನೀಡುವ ಅರ್ಜಿ ನಮೂನೆಗಳು ಕನ್ನಡದಲ್ಲಿರುವಂತೆ ಕ್ರಮವಹಿಸಬೇಕು. ಬಸ್‌ಗಳು ಸಂಚರಿಸುವಾಗ ಡಿಜಿಟಲ್ ಫಲಕಗಳಲ್ಲಿ ಕನ್ನಡಪರ ಘೋಷಣೆ ಗಳನ್ನು ಹಾಕಬೇಕು’ ಎಂದರು.