ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾನ್ಸಿ ಮುತ್ತಣ್ಣ, ಅಮರೇಂದ್ರಗೆ ಕಸಾಪ ದತ್ತಿ ಪ್ರಶಸ್ತಿ

Published 14 ಫೆಬ್ರುವರಿ 2024, 23:37 IST
Last Updated 14 ಫೆಬ್ರುವರಿ 2024, 23:37 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ‘ಸತ್ಯವತಿ ವಿಜಯರಾಘವ ಚಾರಿಟಬಲ್ ಟ್ರಸ್ಟ್ ದತ್ತಿ ಪ್ರಶಸ್ತಿ’ಗೆ ಬರಹಗಾರರಾದ ಕೊಡಗು ಜಿಲ್ಲೆಯ ಕುಶಾಲನಗರದ ಹಂಚೆ‍ಟ್ಟರ ಫ್ಯಾನ್ಸಿ ಮುತ್ತಣ್ಣ ಮತ್ತು ಕೋಲಾರ ಜಿಲ್ಲೆಯ ಅಮರೇಂದ್ರ ಹೊಲ್ಲಂಬಳ್ಳಿ ಆಯ್ಕೆಯಾಗಿದ್ದಾರೆ.

ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ನೇತೃತ್ವದ ಸಮಿತಿ ಈ ಆಯ್ಕೆ ಮಾಡಿದೆ. ಮೈಸೂರಿನ ಎ.ಪುಷ್ಪಾ ಅಯ್ಯಂಗಾರ್ ಈ ದತ್ತಿ ಸ್ಥಾಪಿಸಿದ್ದಾರೆ. 

ಹಂಚೆಟ್ಟರ ಫ್ಯಾನ್ಸಿ ಮುತ್ತಣ್ಣ ಅವರು ಕೊಡಗು ಜಿಲ್ಲೆಯ ಇತಿಹಾಸ ಮತ್ತು ಮಹಿಳಾ ಸಮಸ್ಯೆಗಳ ಕುರಿತು ವಿಶೇಷ ಅಧ್ಯಯನ ನಡೆಸಿದ್ದಾರೆ. ‘ಕಾಡು ಹಕ್ಕಿಯ ಹಾಡು’, ‘ಕಾಡಿದ ನೆನಪುಗಳು’, ‘ಕನವರಿಕೆ’, ‘ಒಡಲ ಉರಿ’ ಸೇರಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಅಮರೇಂದ್ರ ಹೊಲ್ಲಂಬಳ್ಳಿ ಅವರು ಕಥೆ, ನಾಟಕ, ಕಾದಂಬರಿ, ವಿಮರ್ಶೆ ಸೇರಿ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ಬರೆದಿದ್ದಾರೆ. ‘ವಾಲ್ ಪೇಪರ್’, ‘ಬಣ್ಣದ ನೆರಳು’, ‘ಕಾಯ’, ‘ಚಂದ್ರಗುಪ್ತ’ ಅವರ ಪ್ರಮುಖ ಕೃತಿಗಳು’ ಎಂದು ಪ್ರಕಟಣೆ ತಿಳಿಸಿದೆ. 

ಅಮರೇಂದ್ರ ಹೊಲ್ಲಂಬಳ್ಳಿ
ಅಮರೇಂದ್ರ ಹೊಲ್ಲಂಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT