ಶನಿವಾರ, ಮೇ 15, 2021
25 °C

ಕಸಾಪ: ನಗರ ಜಿಲ್ಲೆಗೆ 11 ಮಂದಿ ನಡುವೆ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ 12 ಮಂದಿಯಲ್ಲಿ ಒಬ್ಬರು ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ಇದರಿಂದಾಗಿ ಅಂತಿಮ ಕಣದಲ್ಲಿ 11 ಅಭ್ಯರ್ಥಿಗಳಿದ್ದಾರೆ.

ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾರರನ್ನು ಒಳಗೊಂಡಿರುವ ಬೆಂಗಳೂರು ನಗರ ಜಿಲ್ಲೆ ಘಟಕದ ಅಧ್ಯಕ್ಷ ಗಾದಿಗೆ ಏರಲು ಪ್ರಬಲ ಸ್ಪರ್ಧೆ ಏರ್ಪಟ್ಟಿದೆ. ಮೇ 9 ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಸೋಮವಾರ ಕಡೆಯ ದಿನವಾಗಿತ್ತು. ಸ್ಪರ್ಧಿಸಿದವರಲ್ಲಿ ಪಿ. ಸುಕುಮಾರ್ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ.

ಅಂತಿಮ ಕಣದಲ್ಲಿ ಎಚ್‌.ಎ. ಆತ್ಮಾನಂದ, ಕಾಂತರಾಜಪುರ ಸುರೇಶ್, ಕುವೆಂಪು ಪ್ರಕಾಶ್, ಕೆ.ಎಸ್. ಕೃಷ್ಣೋಜಿರಾವ್, ಆರ್. ಜಯಕುಮಾರ ಗೌಡ, ಎಂ. ತಿಮ್ಮಯ್ಯ, ದಯಾನಂದ ತಿಪ್ಪೇರುದ್ರಪ್ಪ, ಎಂ. ಪ್ರಕಾಶ್ ಮೂರ್ತಿ, ಎಂ. ಪುಟ್ಟರಾಜು, ವೇದಮೂರ್ತಿ ಕೆ.ಸಿ. ಹಾಗೂ ಪಿ.ಸಿ. ಹೇಮಂತಕುಮಾರ್ ಇದ್ದಾರೆ.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 36,596 ಸದಸ್ಯರಿದ್ದಾರೆ. ಇವರಲ್ಲಿ 36,389 ಮಂದಿ ಮತ ಚಲಾವಣೆಯ ಅರ್ಹತೆ ಹೊಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು