ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ. 13 ಮತ್ತು 14ರಂದು ಕಪ್ಪಣ್ಣ –75 ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ

Last Updated 11 ಜನವರಿ 2023, 10:16 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಿದ್ಧ ರಂಗಕರ್ಮಿ ಕಪ್ಪಣ್ಣ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಜೆ.‍ಪಿ. ನಗರದ ಕಪ್ಪಣ್ಣ ಅಂಗಳದಲ್ಲಿ ಇದೇ 13 ಮತ್ತು 14ರಂದು ‘ಕಪ್ಪಣ್ಣ –75 ಎಂಬ ಸಾಂಸ್ಕೃತಿಕ‘ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಸಂಜೆ 6 ಗಂಟೆಗೆ ಆರಂಭವಾಗುವ ಕಾರ್ಯಕ್ರಮ ಪ್ರಜಾವಾಣಿ ಫೇಸ್ ಬುಕ್‌ ಪುಟದಲ್ಲಿ ನೇರ ಪ್ರಸಾರಗೊಳ್ಳಲಿದೆ.

‘ಕಪ್ಪಣ್ಣ ಅಂಗಳ‘ವು 2015ರಲ್ಲಿ ಪ್ರಾರಂಭವಾಗಿ, ಕಲೆಗೆಂದೇ ಮೀಸಲಾಗಿದೆ. ಈಗ ಇದು ದಕ್ಷಿಣ ಬೆಂಗಳೂರಿನ ಖ್ಯಾತ ಕಲಾಭವನವೆಂದು ಹೆಸರು ಮಾಡಿದೆ.

ನೃತ್ಯ ಭಾನು: ಜನವರಿ 13ರಂದು ಪದ್ಮಿನಿ ರವಿ ನೃತ್ಯ ಅಕಾಡೆಮಿಯ ನಿರ್ದೇಶಕರಾದ ಗುರು ಪದ್ಮಿನಿ ರವಿ ಹಾಗೂ ವಸುಂಧರ ದೊರೆಸ್ವಾಮಿ ಕಲಾ ಕೇಂದ್ರ ನಿರ್ದೇಶಕರಾದ ಗುರು ವಸುಂಧರ ದೊರೆಸ್ವಾಮಿ ವಿಶೇಷ ನೃತ್ಯ ಸಮರ್ಪಣೆ ಮಾಡಲಿದ್ದಾರೆ.

ಆಲಾಪ್: ಜನವರಿ 14ರಂದು, ಶನಿವಾರ ವಿದುಷಿ ಆರ್.ಎ. ರಮಾಮಣಿ ಅವರಿಂದ ಕರ್ನಾಟಕ ಸಂಗೀತ ಹಾಗೂ ಉಸ್ತಾದ್ ಹಫೀಜ ಬಾಲೇಖಾನ್ ಅವರಿಂದ ದಾಸ ನಮನ ಮತ್ತು ವಚನ ಗಾಯನ.

ಸ್ಥಳ: ಕಪ್ಪಣ್ಣ ಅಂಗಳ, #148/1,32 ಎ ಮುಖ್ಯ ರಸ್ತೆ, ಜೆ.ಪಿ ನಗರ ಮೊದಲ ಹಂತ, ಬೆಂಗಳೂರು– 560078.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT