ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮರಣೀಯ ಘಟನೆಗಳ ಛಾಯಾಚಿತ್ರ ಲೋಕ

Last Updated 27 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ಮಳೆ ತಂದ ಅವಾಂತರ ಗಳು, ಕೋವಿಡ್ ಸಂದರ್ಭದ ಕರುಣಾ ಜನಕ ಕಥೆಗಳು, ಹಕ್ಕಿಗಳ ಕಲರವ... ಹೀಗೆ ನಗರದಲ್ಲಿ ನಡೆದ ಸ್ಮರಣೀಯ ಘಟನೆಗಳು ಹಾಗೂ ವೈವಿಧ್ಯಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿಯಲಾಗಿದ್ದು, ಅವುಗಳ ಪ್ರದರ್ಶನಕ್ಕೆ ಕರ್ನಾಟಕ ಚಿತ್ರಕಲಾ ಪರಿಷತ್ತು ವೇದಿಕೆ ಕಲ್ಪಿಸಿದೆ.

ಫೋಟೊ ಜರ್ನಲಿಸ್ಟ್ಸ್‌ ಅಸೋಸಿ ಯೇಷನ್ ಆಫ್ ಬೆಂಗಳೂರು ಹಮ್ಮಿ ಕೊಂಡಿರುವ ‘ಫ್ರೋಜನ್ ಮೆಮೋರಿಸ್’ ಎಂಬ ಛಾಯಾಚಿತ್ರ ಪ್ರದರ್ಶನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಚಾಲನೆ ನೀಡಿ, ಶುಭ ಹಾರೈಸಿದರು. ಈ ಪ್ರದರ್ಶನ ಇದೇ 29ರ ವರೆಗೂ ನಡೆಯಲಿದೆ.

ಮೂರು ದಿನಗಳ ಪ್ರದರ್ಶನದಲ್ಲಿ 70 ಛಾಯಾಗ್ರಾಹಕರ 140 ಛಾಯಾಚಿತ್ರಗಳನ್ನು ನೋಡಲು ಲಭ್ಯ. ಇಲ್ಲಿನ ಛಾಯಾಚಿತ್ರಗಾರರು ಮೈಸೂರು ಸೇರಿ ವಿವಿಧೆಡೆ ತೆರಳಿದಾಗ, ಸೆರೆಹಿಡಿದ ಛಾಯಾಚಿತ್ರಗಳೂ ಪ್ರದರ್ಶನದಲ್ಲಿವೆ. ಕೋವಿಡ್ ಸಂದರ್ಭದಲ್ಲಿ ಕೊರೊನಾ ಯೋಧರ ಸೇವೆ ಹಾಗೂ ಕಾರ್ಮಿಕರ ವಲಸೆಯನ್ನು ಛಾಯಾಚಿತ್ರದ ಮೂಲಕ ಮತ್ತೆ ನೆನಪಿಸಲಾಗಿದೆ. ಮೋಡದಿಂದ ಆವರಿಸಿದ ಆಗಸ, ಮಳೆ ತಂದ ಅವಾಂತರಗಳೂ ಛಾಯಾಚಿತ್ರಗಳಲ್ಲಿ ಅನಾವರಣಗೊಂಡಿವೆ.

ಪ್ರದರ್ಶನದಲ್ಲಿನ ಛಾಯಾಚಿತ್ರ ಗಳುಸಿಹಿ, ಕಹಿ ಘಟನೆಗಳನ್ನು ನೆನಪಿಸಲಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಲ್ಲಿಗೆ ಭೇಟಿ ನೀಡಿದ ಛಾಯಾಚಿತ್ರಗಳೂ ಪ್ರದರ್ಶನದಲ್ಲಿವೆ. ಪ್ರತಿಭಟನೆ, ಧಾರ್ಮಿಕ ಆಚರಣೆ, ಕ್ರೀಡೆಗೆ ಸಂಬಂಧಿಸಿದ ಛಾಯಾಚಿತ್ರಗಳನ್ನೂ ಪ್ರದರ್ಶನದಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT