ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿಯ ದೇವರ ಬೀಸನ ಹಳ್ಳಿಯಲ್ಲಿ ಸಾಫ್ಟ್ವೇರ್ ಕಂಪನಿಯೊಂದಕ್ಕೆ ನೀಡಲಾಗಿದ್ದ 36 ಗುಂಟೆ ಜಮೀನಿನ ಅಧಿಸೂಚನೆಯನ್ನು ಡಿ-ನೋಟಿಫೈ ಮಾಡಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್ ಈಗ ಎತ್ತಿಹಿಡಿದಿದೆ.

ಈ ಸಂಬಂಧ ಮೂಲ ಭೂ ಮಾಲೀಕ ದಿವಂಗತ ಪಟೇಲ್ ಜೇತಲಾಲ್ ರಾಮ್ ಜಿ ಅವರ ವಾರಸುದಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಡಿ.ಕೆ. ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ.

ಏಕಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದುಗೊಳಿಸಿರುವ ವಿಭಾಗೀಯ ನ್ಯಾಯಪೀಠ ‘ರಿಟ್ ಅರ್ಜಿ ಸಲ್ಲಿಸಿದ್ದ ರಾಯಲ್ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು, ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗೆ ಕಾರಣವಾಗಬಹುದಾದ ಗುಟ್ಕಾ ತಯಾರಿಕೆಯಲ್ಲಿ ತೊಡಗಿರುವ ಕಂಪನಿ ಎಂಬುದು ಆಘಾತಕಾರಿ ವಿಚಾರ’ ಎಂದು ಕಳವಳ ವ್ಯಕ್ತಪಡಿಸಿದೆ.

ಅಂತೆಯೇ, ‘ಇದು ಬಡ ರೈತರ ಭೂಮಿಯಲ್ಲಿ ಅಧಿಕಾರಿಗಳು ಭೂ ಹಿತಾಸಕ್ತಿಗಳ ಪರವಾಗಿ ನಡೆಸಿದ ಹಗಲು ದರೋಡೆಯಂತಿದೆ. ಸರಿಯಾದ ಕಾನೂನು ಪ್ರಕ್ರಿಯೆ ಪಾಲನೆ ಮಾಡದೆ ಯಾವುದೇ ವ್ಯಕ್ತಿಯ ಆಸ್ತಿಯನ್ನು ಅವರಿಂದ ವಂಚಿತಗೊಳಿಸಲು ಆಗುವುದಿಲ್ಲ. ಸಾರ್ವಜನಿಕ ಉದ್ದೇಶಕ್ಕಾಗಿ ಮಾತ್ರವೇ ಆಸ್ತಿಯನ್ನು ಸ್ವಾಧೀನಕ್ಕೆ ಪಡೆಯಬಹುದು’ ಎಂದು ಸ್ಪಷ್ಟಪಡಿಸಿದೆ.

‘ಕೆಐಎಡಿಬಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿರುವ ವರದಿಯನ್ನು ಗಮನಿಸಿದಾಗ, ಕ್ಷೇತ್ರ ಪರಿಣಿತಿ ಇಲ್ಲದ ಕಂಪನಿಗಳಿಗೆ ಭೂಮಿ ನೀಡುತ್ತಿರುವುದನ್ನು ಸ್ಥಳೀಯ ರೈತರು ವಿರೋಧಿಸುತ್ತಿದ್ದ ಕಾರಣ ನೈಜ ಸಾಫ್ಟ್ವೇರ್ ಕಂಪನಿಯಾದ ಇನ್ಫೋಸಿಸ್ ನಂತಹವರಿಗೂ ಭೂಮಿ ಹಂಚಿಕೆ ಮಾಡಲು ಸಾಧ್ಯವಾಗಲಿಲ್ಲ ಎಂಬುದು ಗಮನಾರ್ಹ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣವೇನು?

ವಿವಾದಿತ ಜಮೀನನ್ನು ಸಾಫ್ಟ್ವೇರ್ ಪಾರ್ಕ್ ಸ್ಥಾಪಿಸಲು ನವದೆಹಲಿಯ, ‘ರಾಯಲ್ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿ’ಗೆ ಕೆಐಎಡಿಬಿ (ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ) ಮುಖಾಂತರ ಹಂಚಿಕೆ ಮಾಡಲಾಗಿತ್ತು.

ತದನಂತರ ಸರ್ಕಾರ ಪರಿಶೀಲನೆ ನಡೆಸಿದಾಗ, ‘ರಾಯಲ್ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿ’ ಸಾಫ್ಟ್ವೇರ್ ಉತ್ಪಾದನೆ ಅಥವಾ ಕಂಪ್ಯೂಟರ್ ಸಂಬಂಧಿತ ಉತ್ಪಾದನಾ ಕ್ಷೇತ್ರದಲ್ಲಿ ಯಾವುದೇ ಅನುಭವ ಹೊಂದಿಲ್ಲ. ಆದರೂ, ಜಮೀನು ಮಂಜೂರು ಮಾಡಲಾಗಿದೆ ಎಂಬ ವರದಿಯ ಆಧಾರದ ಮೇಲೆ, 2009ರಲ್ಲಿ 36 ಗುಂಟೆ ಜಮೀನಿನ ಅಧಿಸೂಚನೆಯನ್ನು ಡಿ-ನೋಟಿಫೈ ಮಾಡಿತ್ತು.

ಇದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ಕಂಪನಿ ಅರ್ಜಿಯನ್ನು ಪುರಸ್ಕರಿಸಿ ಡಿ-ನೋಟಿಫಿಕೇಶನ್ ಆದೇಶವನ್ನು 2013ರಲ್ಲಿ ರದ್ದುಗೊಳಿಸಿತ್ತು.

ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಜಮೀನಿನ ಮೂಲ ಮಾಲೀಕರಾದ ದಿವಂಗತ ಪಟೇಲ್ ಜೇತಲಾಲ್ ರಾಮ್ ಜಿ ಅವರ ಕುಟುಂಬದ ಸದಸ್ಯರು ವಿಭಾಗೀಯ ನ್ಯಾಯಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.