ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖಕಿಯರ ಸಂಘ: ವಾರ್ಷಿಕ ದತ್ತಿ ಪ್ರಶಸ್ತಿ ಪ್ರಕಟ

Last Updated 21 ನವೆಂಬರ್ 2020, 20:58 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘವು 2019ನೇ ಸಾಲಿನ ವಾರ್ಷಿಕ ದತ್ತಿ ಪ್ರಶಸ್ತಿಗಳು ಹಾಗೂ ಬಹುಮಾನಗಳನ್ನು ಘೋಷಿಸಿದೆ.

‘ಭಾಗ್ಯ ನಂಜಪ್ಪ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ಗೆ ಡಾ.ಬಿ.ಎಸ್.ಶೈಲಜಾ ಅವರ ‘ಆಕಾಶದಲ್ಲಿ ಏನಿವೆ? ಏಕಿವೆ?’ ಕೃತಿ ಆಯ್ಕೆಯಾಗಿದೆ. ‘ನಾಗರತ್ನ ಚಂದ್ರಶೇಖರ್ ದತ್ತಿ ಪ್ರಶಸ್ತಿ’ಗೆ ಸುಮವೀಣಾ ಅವರ ‘ನಲಿವ ನಾಲಿಗೆ’ ಪ್ರಬಂಧ ಸಂಕಲನ, ವಿಶಿಷ್ಟ ಲೇಖಕಿ ಪ್ರಶಸ್ತಿಗೆ ಚಿತ್ರದುರ್ಗದ ಷರೀಫಾ ಬಿ., ಬೆಳಗಾವಿಯ ಜ್ಯೋತಿ ಬದಾಮಿ, ಬೆಂಗಳೂರಿನ ಪದ್ಮಾವತಿ ಚಂದ್ರು, ಡಾ.ಎಸ್.ಜಿ. ಮಾಲತಿ ಶೆಟ್ಟಿ, ಡಾ. ಗೀತಾ ಪ್ರಸಾದ್ ಭಾಜನರಾಗಿದ್ದಾರೆ.

‘ಗೀತಾ ದೇಸಾಯಿ ದತ್ತಿನಿಧಿ ಬಹುಮಾನ’ಕ್ಕೆ ನಾಗರೇಖಾ ಗಾಂವಕರ ಅವರ ‘ಬರ್ಫದ ಬೆಂಕಿ’ ಕವನ ಸಂಕಲನ, ‘ಕಾಕೋಳು ಸರೋಜಮ್ಮ ಕಾದಂಬರಿ ಬಹುಮಾನ’ಕ್ಕೆ ಸವಿತಾ ಶ್ರೀನಿವಾಸ್ ಅವರ ‘ತ್ರಿಲೋಕ ಸಂಚಾರಿ ನೀರೆ’ ಕಾದಂಬರಿ, ‘ಸುಧಾಮೂರ್ತಿ ದತ್ತಿನಿಧಿ ತ್ರಿವೇಣಿ ಸಾಹಿತ್ಯ ಪುರಸ್ಕಾರ’ಕ್ಕೆ ಜಯಶ್ರೀ ದೇಶಪಾಂಡೆ ಅವರ ‘ಸ್ಥವಿರ ಜಂಗಮಗಳಾಚೆ’ ಕಥಾ ಸಂಕಲನ, ‘ಕಮಲಾ ರಾಮಸ್ವಾಮಿ ದತ್ತಿನಿಧಿ ಬಹುಮಾನ’ಕ್ಕೆ ಊರ್ಮಿಳಾ ರಾವ್ ಅವರ ‘ಯಾನ’ ಪ್ರವಾಸ ಸಾಹಿತ್ಯ, ‘ನುಗ್ಗೇಹಳ್ಳಿ ಪಂಕಜಾ ದತ್ತಿನಿಧಿ ಬಹುಮಾನ’ಕ್ಕೆ ಡಾ. ಸುಲತ ಅವರ ‘ಅಂಬಾ ಶಪಥ’ ಲಘು ಪ್ರಬಂಧವು ಆಯ್ಕೆಯಾಗಿದೆ.

‘ಗುಣಸಾಗರಿ ನಾಗರಾಜು ದತ್ತಿನಿಧಿ ಬಹುಮಾನ’ಕ್ಕೆ ವಿಶಾಲ ಆರಾಧ್ಯ ಅವರ ‘ಬೊಂಬಾಯಿ ಮಿಠಾಯಿ’ ಮಕ್ಕಳ ಸಾಹಿತ್ಯ, ‘ಇಂದಿರಾ ವಾಣಿರಾವ್ ದತ್ತಿನಿಧಿ ಬಹುಮಾನ’ಕ್ಕೆ ಕೃಷ್ಣಾಬಾಯಿ ಹಾಗಲವಾಡಿ ಅವರ ‘ದಾನ ಚಿಂತಾಮಣಿ ಅತ್ತಿಮಬ್ಬೆ’ ನಾಟಕ, ‘ನೀಳಾದೇವಿ ದತ್ತಿನಿಧಿ ಬಹುಮಾನ’ಕ್ಕೆ ಮಂದಾಕಿನಿ ಪುರೋಹಿತ ಅವರ ‘ಡಾ. ಸರೋಜಿನಿ ಶಿಂತ್ರಿ’ ಜೀವನ ಚರಿತ್ರೆ, ‘ಡಾ. ಜಯಮ್ಮ ಕರಿಯಣ್ಣ ದತ್ತಿನಿಧಿ ಬಹುಮಾನ’ಕ್ಕೆ ಡಾ. ಇಂದಿರಾ ಹೆಗ್ಗಡೆ ಅವರ ‘ಬಾರ್ಕೂರಿನ ಕುಂಡೋದರ ಮತ್ತು ಅಳಿಯ ಸಂತಾನ ಕಟ್ಟು’ ಸಂಶೋಧನಾ ಕೃತಿ ಹಾಗೂ ‘ನಿರ್ಮಲಾ ಎಲಿಗಾರ್ ದತ್ತಿನಿಧಿ ಬಹುಮಾನ’ಕ್ಕೆ ಉದಯೋನ್ಮುಖ ಕವಿಯತ್ರಿಯರಾದ ಅನಿತಾ ಸಿಕ್ವೇರಾ, ಮಾನಸಾ ಕೆ.ಕೆ., ಕುಶಾಲ ಸ್ವಾಮಿ, ರಾಜಶ್ರೀ ಶೆಟ್ಟಿ ಮತ್ತು ಶಶಿರೇಖಾ ಜಿ.ಕೆ. ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT