ಬೆಂಗಳೂರು: ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೊ ಲಸಿಕೆ ವಿತರಣೆ ಅಭಿಯಾನದಡಿ ಈ ವರ್ಷ ನಿಗದಿತ ಗುರಿಗಿಂತ ಅಧಿಕ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗಿದೆ.

ಇಲಾಖೆಯು ಐದು ವರ್ಷದೊಳಗಿನ 62.40 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ವಿತರಿಸುವ ಗುರಿ ಹಾಕಿಕೊಂಡಿತ್ತು. ಶೇ 103 ರಷ್ಟು ಗುರಿ ಸಾಧಿಸಿದ್ದು, 64.25 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗಿದೆ.

ಆರೋಗ್ಯ ಕೇಂದ್ರಗಳು ಹಾಗೂ ಶಾಲೆಗಳ ಜತೆಗೆ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮೆಟ್ರೊ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಇದೇ 21ರಂದು ಪೋಲಿಯೊ ಹನಿ ವಿತರಣೆ ಮಾಡಲಾಗಿತ್ತು. ಬಿಟ್ಟು ಹೋದ ಹಾಗೂ ಅಭಿಯಾನದಿಂದ ಹೊರಗುಳಿದ ಮಕ್ಕಳಿಗೆ ಮುಂದಿನ ಮೂರು ದಿನಗಳ ಅವಧಿಯಲ್ಲಿ ಮನೆ– ಮನೆಗೆ ತೆರಳಿ ಪೋಲಿಯೊ ಹನಿ ಹಾಕಲಾಗಿದೆ.

ಡಿ.21 ರಂದು 60.16 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ಒದಗಿಸಲಾಗಿತ್ತು. 22ರಂದು 2.17 ಲಕ್ಷ 23 ರಂದು 1.21 ಲಕ್ಷ ಹಾಗೂ 24ರಂದು 69 ಸಾವಿರ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಗಿದೆ.

ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ವ್ಯಾಪ್ತಿಯಲ್ಲಿ ಗರಿಷ್ಠ ಮಕ್ಕಳಿಗೆ (11.65 ಲಕ್ಷ) ಪೋಲಿಯೊ ಹನಿ ಹಾಕಲಾಗಿದೆ. ಶಿವಮೊಗ್ಗ ಹೊರತುಪಡಿಸಿ ಎಲ್ಲ ಜಿಲ್ಲೆಗಳು ಶೇ 100 ಹಾಗೂ ಅದಕ್ಕಿಂತ ಹೆಚ್ಚಿನ ಗುರಿ ಸಾಧನೆ ಮಾಡಿವೆ.

ಪೋಲಿಯೊ ಹನಿ ಹಾಕುವ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗಿತ್ತು. ಗುಡ್ಡಗಾಡು ಪ್ರದೇಶ ಸೇರಿ ಕಟ್ಟ ಕಡೆಯಲ್ಲಿ ವಾಸಿಸುವ ಕುಟುಂಬಗಳನ್ನೂ ನಮ್ಮ ಕಾರ್ಯಕರ್ತರು ತಲುಪಿದ್ದಾರೆ
ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.