ಬೆಂಗಳೂರು: ಕಿ.ರಂ.ನಾಗರಾಜ್ ನೆನಪಿನ ‘ಕಾವ್ಯ ಶಿವರಾತ್ರಿ ಅಹೋರಾತ್ರಿ ಕಾವ್ಯಗಾಯನ' ಕಾರ್ಯಕ್ರಮವು ಬೆಂಗಳೂರು ವಿಶ್ವವಿದ್ಯಾಲಯದ ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಜನಸಂಸ್ಕೃತಿ ಪ್ರತಿಷ್ಠಾನ, ಕಾವ್ಯಮಂಡಲ, ಬೆಂಗಳೂರು ವಿಶ್ವವಿದ್ಯಾಲಯದ ರಾಮನಗರ ಸ್ನಾತಕೋತ್ತರ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯೂ ನಡೆಯಿತು.

ವಿಶ್ರಾಂತ ಪ್ರಾಧ್ಯಾಪಕ ಟಿ.ವೆಂಕಟೇಶಮೂರ್ತಿ ಉದ್ಘಾಟಿಸಿದರು. ಶ್ರುತಿ ಶಿಲ್ಪಿ ಏಕತಾರಿ ರಾಮಯ್ಯ ಅವರಿಗೆ ಕಿ.ರಂ. ಪುರಸ್ಕಾರ ಪ್ರದಾನ ಮಾಡಲಾಯಿತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್, ಕಿ.ರಂ. ಪುತ್ರಿ ಕೆ.ಎನ್. ಕವನ, ಸ್ನಾತಕೋತ್ತರ ಕೇಂದ್ರ ನಿರ್ದಶಕ ಬಿ. ಗಂಗಾಧರ್, ಜನಸಂಸ್ಕೃತಿ ಅಧ್ಯಕ್ಷ ಪ್ರದೀಪ್ ಮಾಲ್ಗುಡಿ, ಸಂಸ ಸುರೇಶ್ ಉಪಸ್ಥಿತರಿದ್ದರು.

ಮಂಟೇಸ್ವಾಮಿ ಮತ್ತು ಮಲೆ ಮಹಾದೇಶ್ವರ ಮಹಾಕಾವ್ಯ ಗಾಯನವನ್ನು ಅಲ್ಕೆರೆ ಶಿವಕುಮಾರ್ ಮತ್ತು ಸಂಗಡಿಗರು ಅಹೋರಾತ್ರಿ ಪ್ರಸ್ತುತ ಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.