ಬೆಂಗಳೂರು: ‘ಕೆ.ಸಿ ಜನರಲ್ ಆಸ್ಪತ್ರೆಯ ಆವರಣದಲ್ಲಿ 100 ಹಾಸಿಗೆಗಳ ಕೋವಿಡ್ ಮಾಡ್ಯೂಲರ್ ಐಸಿಯು ಘಟಕವನ್ನು ಸ್ಥಾಪಿಸಲಾಗಿದ್ದು, ಹತ್ತು ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಸರಕು ಸಾಗಣೆ ಕಂಟೇನರ್‌ಗಳಲ್ಲಿ50 ಹಾಸಿಗೆಗಳ ಐಸಿಯು ಹಾಗೂ ಆಸ್ಪತ್ರೆ ಆವರಣದಲ್ಲೇ ಇದ್ದ ಐಪಿಪಿ ಕಟ್ಟಡದಲ್ಲಿ 50 ಹಾಸಿಗೆಗಳ ರಿಮೋಟ್ ಐಸಿಯು ಘಟಕವನ್ನು ಸಿದ್ಧಪಡಿಸಲಾಗಿದೆ.ಎರಡೂ ಘಟಕಗಳನ್ನು ಬುಧವಾರ ಪರಿಶೀಲಿಸಿದ ಅವರು, ‘11 ದಾನಿಗಳ ನೆರವಿನಿಂದ ಈ ಘಟಕ ಸಿದ್ಧಪಡಿಸಲಾಗಿದೆ’ ಎಂದರು.

‘ಆಸ್ಪತ್ರೆಯಲ್ಲಿಐಸಿಯುಗಳು ಸೇರಿ ದಂತೆ ಸಾಮಾನ್ಯ ಹಾಸಿಗೆಗಳ ಕೊರತೆಯಿತ್ತು. ಹೀಗಾಗಿ ಐಪಿಪಿ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸಿ, ಆ ಕಟ್ಟಡದಲ್ಲಿ 50 ಅತ್ಯಾಧುನಿಕ ವೆಂಟಿಲೇಟರ್‌ಗಳನ್ನುಅಳವಡಿಸುವ ಮೂಲಕಅತ್ಯಾಧುನಿಕವಾದ ತೀವ್ರ ನಿಗಾ ಘಟಕವನ್ನಾಗಿ ರೂಪಿಸಲಾಗಿದೆ. ಎಲ್ಲ ವೆಂಟಿಲೇಟರುಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ದ್ರವರೂಪದ ಆಮ್ಲಜನಕ ಪೂರೈ
ಸುವ ವ್ಯವಸ್ಥೆ ಮಾಡಲಾಗಿದೆ. ಇವುಗಳಿಗೆಮಾನಿಟರ್‌ಗಳನ್ನು ಕೂಡ ಅಳವಡಿಸಲಾಗುತ್ತಿದ್ದು, ಅವುಗಳ ಖರೀದಿಗೆ ಈಗಾಗಲೇ ಸರ್ಕಾರ ಅನುಮತಿ ನೀಡಿದೆ’ ಎಂದರು.

ಐಸಿಯುಗಳ ಪ್ರಾಯೋಗಿಕ ಬಳಕೆ: ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುಲಭವಾಗಿ ಸಾಗಿಸಬಹುದಾದ ಮೊಬೈಲ್ ಐಸಿಯುಗಳೇ ಮಾಡ್ಯೂಲರ್ ಐಸಿಯುಗಳಾಗಿವೆ. ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಕಂಟೈನರ್‌ಗಳನ್ನು ಬಳಸಿ
ಕೊಂಡು ನಗರದ ‘ರಿನ್ಯಾಕ್’ ಎಂಬ ಕಂಪನಿಯು ಐಸಿಯುಗಳನ್ನು ಅಭಿವೃದ್ಧಿಪಡಿಸಿದೆ.ಆಮ್ಲಜನಕ ವ್ಯವಸ್ಥೆ ಜತೆಗೆ ಹವಾನಿಯಂತ್ರಿತ ವ್ಯವಸ್ಥೆ ಮಾಡಲಾಗಿದೆ.

ಈ ಐಸಿಯುಗಳಲ್ಲಿಕ್ಯಾಮೆರಾ ಕೂಡ ಇದ್ದು, ಆನ್ ಲೈನ್ ಮೂಲಕ ಚಿಕಿತ್ಸೆ ನೀಡಲು ಬೇಕಾದ ಎಲ್ಲ ಪರಿಕರಗಳನ್ನು ಅಳವಡಿಸಲಾಗಿದೆ. ಪ್ರತಿ ಕಂಟೈನರ್‌ನಲ್ಲಿ 5 ಹಾಸಿಗೆಗಳು ಇರಲಿದ್ದು, ಆಯಾ ಆಸ್ಪತ್ರೆಗಳ ವೈದ್ಯರೇ ಇವುಗಳಲ್ಲಿ ದಾಖಲಾಗಿರುವ ರೋಗಿಗಳಿಗೂ ಚಿಕಿತ್ಸೆ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.