ಬೆಂಗಳೂರು: ‘ಕೌನ್ಸೆಲಿಂಗ್ ವೇಳೆ ಸೀಟ್ ಬ್ಲಾಕ್ ಮಾಡು. ಆದರೆ, ಅಡ್ಮಿಷನ್ ಮಾಡಿಸಬೇಡ. ಆ ಸೀಟನ್ನು ನಾವು ಖಾಸಗಿಯವರಿಗೆ ಕೊಡುತ್ತೇವೆ. ಸೀಟು ಬಿಟ್ಟುಕೊಟ್ಟರೆ ನಿನಗೆ ₹50 ಸಾವಿ ನೀಡುತ್ತೇವೆ...’ ಕಾಮೆಡ್–ಕೆ ಸೀಟು ಹಂಚಿಕೆ ಪ್ರಕ್ರಿಯೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಈ ರೀತಿಯ ಸಂಭಾಷಣೆಯ ಸ್ಕ್ರೀನ್ಶಾಟ್ಗಳು ವಾಟ್ಸ್ಆ್ಯಪ್ನಲ್ಲಿ ಹರಿದಾಡುತ್ತಿವೆ.

‘ಕಾಮೆಡ್–ಕೆ ಸೀಟೇ ನಿನ್ನ ಕೊನೆಯ ಆಯ್ಕೆಯೇ’ ಎಂದು ಕಾಮೆಡ್–ಕೆ ಸಂಬಂಧಿಸಿದವರು ಎನ್ನಲಾದ ವ್ಯಕ್ತಿಯೊಬ್ಬರು, ವಿದ್ಯಾರ್ಥಿಗೆ ಕೇಳಿದ್ದಾರೆ. ‘ನಾನು ಜೈಪುರ್ ಎಲ್ಎನ್ಎಂಐಐಟಿಯಲ್ಲಿಯೂ ನೋಂದಣಿ ಮಾಡಿಸಿದ್ದೇನೆ’ ಎಂದು ವಿದ್ಯಾರ್ಥಿ ಉತ್ತರಿಸಿದ್ದಾನೆ. ‘ಕಾಮೆಡ್–ಕೆ ಸೀಟು ಬಿಟ್ಟುಕೊಟ್ಟರೆ ನಿನಗೆ ₹50 ಸಾವಿರ ಕೊಡುತ್ತೇವೆ. ಆ ಸೀಟನ್ನು ಮ್ಯಾನೇಜ್ಮೆಂಟ್ ಕೋಟಾ ಅಡಿ ಭರ್ತಿ ಮಾಡಿಕೊಳ್ಳುತ್ತೇವೆ. ಈ ಬಾರಿ ಆನ್ಲೈನ್ನಲ್ಲಿ ಎಲ್ಲ ಪ್ರಕ್ರಿಯೆ ನಡೆಯುತ್ತಿರುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂದು ವ್ಯಕ್ತಿ ಹೇಳಿದ್ದಾರೆ.

‘ಕಷ್ಟಪಟ್ಟು ಓದಿರುವ ಮೆರಿಟ್ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗುವುದಿಲ್ಲವೇ? ಹಲವು ವರ್ಷಗಳಿಂದ ನೀವು ಈ ರೀತಿಯ ಅಕ್ರಮ ಎಸಗುತ್ತಿದ್ದೀರಿ ಎನಿಸುತ್ತದೆ’ ಎಂದು ವಿದ್ಯಾರ್ಥಿ ಪ್ರತಿಕ್ರಿಯಿಸಿರುವ ಸ್ಕ್ರೀನ್ಶಾಟ್ಗಳು ಹರಿದಾಡುತ್ತಿವೆ.

ಇದನ್ನು ಅಲ್ಲಗಳೆದಿರುವ ಕಾಮೆಡ್–ಕೆ, ‘ಈ ಸಂಭಾಷಣೆಗೂ ಒಕ್ಕೂಟಕ್ಕೂ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದೆ.

‘ಈ ಸಂಭಾಷಣೆಗೂ ಕಾಮೆಡ್–ಕೆಗೂ ಯಾವುದೇ ಸಂಬಂಧವಿಲ್ಲ. ಸ್ಕ್ರೀನ್ಶಾಟ್ನಲ್ಲಿ ಈ ಸಂಭಾಷಣೆ ನಡೆಸಿರುವ ದೂರವಾಣಿ ಸಂಖ್ಯೆಯು ಕಾಮೆಡ್–ಕೆಯ ಯಾವುದೇ ವ್ಯಕ್ತಿಗೆ ಸೇರಿದ್ದಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರು ಈ ಬಗ್ಗೆ ಗೊಂದಲಕ್ಕೆ ಒಳಗಾಗಬಾರದು. ಸೀಟು ಹಂಚಿಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದೆ’ ಎಂದು ಕಾಮೆಡ್–ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್. ಕುಮಾರ್ ಸ್ಪಷ್ಟಪಡಿಸಿದ್ದಾರೆ. ಕಾಮೆಡ್–ಕೆ ವೆಬ್ಸೈಟ್ನಲ್ಲಿಯೂ ಈ ಸ್ಪಷ್ಟನೆ ಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.