ಬೆಂಗಳೂರು: ವಿಜಯನಗರ ಸಾಮ್ರಾಜ್ಯದ ವೈಭವವನ್ನು ನೋಡಿದ್ದ ಕೆಂಪೇಗೌಡರು ಅದೇ ರೀತಿಯ ವೈಭವಯುತ ರಾಜ್ಯವನ್ನು ಕಟ್ಟಲು ಬೆಂದಕಾಳೂರು ನಗರವನ್ನು ಸ್ಥಾಪಿಸಿದ್ದರು ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ತಿಳಿಸಿದರು.

ನಾಡಪ್ರಭು ಕೆಂಪೇಗೌಡ ವಿಚಾರ ವೇದಿಕೆ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಕೆಂಪೇಗೌಡರ 516ನೇ ಜಯಂತ್ಯುತ್ಸವ, ಸಾಧಕರಿಗೆ ಗೌರವ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಂದರ ನಗರದ ಕನಸು ಕಂಡಿದ್ದ ಕೆಂಪೇಗೌಡರು ಅದ್ಭುತವಾಗಿ ನಿರ್ಮಿಸಿ ಕನಸು ನನಸು ಮಾಡಿದ್ದರು. ಇಂದು ವಿಶ್ವದ ದೊಡ್ಡ ನಗರಗಳಲ್ಲಿ ಒಂದಾಗಿ ಬೆಂಗಳೂರು ಹೆಸರು ಮಾಡಲು ಕೆಂಪೇಗೌಡರ ಕೊಡುಗೆ ಅಪಾರ ಎಂದು ಹೇಳಿದರು.

ರಾಜ್ಯದ ಜನರಷ್ಟೇ ಅಲ್ಲ, ದೇಶ, ವಿದೇಶದವರೂ ಆರ್ಥಿಕ, ಔದ್ಯೋಗಿಕ, ಶೈಕ್ಷಣಿಕವಾಗಿ ಬೆಂಗಳೂರು ನಗರದಿಂದ ಸವಲತ್ತು ಪಡೆದುಕೊಳ್ಳುತ್ತಿದ್ದಾರೆ. ಅದಕ್ಕೆ ಕೆಂಪೇಗೌಡರು ಹಾಕಿದ ಅಡಿಪಾಯ ಕಾರಣ ಎಂದರು.

ರಾಷ್ಟ್ರಪತಿ ಪದಕ ಪುರಸ್ಕೃತರಾದ ಡಾ. ನಾಗರಾಜಯ್ಯ, ನಾಟ್ಯ ಸರಸ್ವತಿ ಶಾಂತಲಾ, ಕನ್ನಡ ಕಲಾ ಸಂಘದ ಪ್ರಧಾನ ಕಾರ್ಯದರ್ಶಿ ಆಂಜನೇಯ, ಕೆಂಪೇಗೌಡ ಕೇಂದ್ರ ಸಮಿತಿಯ ಹಿರಿಯ ವ್ಯವಸ್ಥಾಪಕ ಸದಸ್ಯ ಬಿ.ಎಂ. ನಾರಾಯಣಸ್ವಾಮಿ, ಟ್ರಸ್ಟ್ ಸದಸ್ಯ ಕುಮಾರಸ್ವಾಮಿ ಅವರನ್ನು ಶಾಸಕ ಎಂ. ಕೃಷ್ಣಪ್ಪ ಸನ್ಮಾನಿಸಿದರು.

ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ವಕೀಲ ಸಿ.ಎಚ್. ಹನುಮಂತರಾಯಪ್ಪ, ಯುಎಸ್ಡಿಎ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ನಾಗೇಶ್, ವೈದ್ಯರಾದ ಡಾ. ಟಿ.ಎಚ್. ಆಂಜನಪ್ಪ, ಟ್ರಸ್ಟ್ ಅಧ್ಯಕ್ಷ ಟಿ. ಪಾಪಣ್ಣ ಇಗ್ಗಲೂರು, ಉಪಾಧ್ಯಕ್ಷೆ ಎಸ್. ಜಯಲಕ್ಷ್ಮಿ, ಗೌರವ ಸಲಹೆಗಾರ ಸಿ. ನಂಜುಂಡಯ್ಯ, ಕನ್ನಡ ಜನಶಕ್ತಿ ಕೇಂದ್ರದ ಸಿ.ಕೆ. ರಾಮೇಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.