ಶುಕ್ರವಾರ, ಸೆಪ್ಟೆಂಬರ್ 25, 2020
21 °C
ಬಿಬಿಎಂಪಿ ಕೌನ್ಸಿಲ್‌ ಸಭೆಯೂ ಮುಂದೂಡಿಕೆ

ಕೆಂಪೇಗೌಡ ಜಯಂತಿಗೆ ಮತ್ತೆ ವಿಘ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದೇ 2ರಂದು ನಡೆಯಬೇಕಾಗಿದ್ದ ನಾಡಪ್ರಭು ಕೆಂಪೇಗೌಡ ದಿನಾಚರಣೆ ಹಾಗೂ ಕೆಂಪೇಗೌಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ನಿಧನದ ಶೋಕಾಚರಣೆ ಸಲುವಾಗಿ ಬಿಬಿಎಂಪಿ ಮುಂದೂಡಿದೆ.

ಈ ಸಾಲಿನ ಕೆಂಪೇಗೌಡ ಜಯಂತಿ ಮುಂದೂಡಿಕೆಯಾಗುತ್ತಿರುವುದು ಇದು ಎರಡನೇ ಬಾರಿ. ಈ ಸಾಲಿನಲ್ಲಿ ಐತಿಹಾಸಿಕ ಕರಗ ಮಹೋತ್ಸವದ ದಿನವೇ (ಏ.08) ಈ ಕಾರ್ಯಕ್ರಮವನ್ನು ಏರ್ಪಡಿಸಲು ಬಿಬಿಎಂಪಿ ನಿರ್ಧರಿಸಿತ್ತು. ನಗರದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಈ ಕಾರ್ಯಕ್ರಮ ಮುಂದೂಡಿಕೆಯಾಗಿತ್ತು.

ಸೆ.5ರಂದು ನಡೆಯಬೇಕಿದ್ದ ಪಾಲಿಕೆ ಕೌನ್ಸಿಲ್‌ ಸಭೆಯನ್ನೂ ಕೂಡ ಶೋಕಾಚರಣೆಯ ಕಾರಣಕ್ಕೆ ಮುಂದೂಡಲಾಗಿದೆ. ಆ. 28ರಂದು ನಡೆಯಬೇಕಿದ್ದ ಕೌನ್ಸಿಲ್‌ ಸಭೆಯೂ ಕಾರಣಾಂತರಗಳಿಂದ ನಡೆದಿರಲಿಲ್ಲ. ಇದನ್ನು ಖಂಡಿಸಿ ವಿರೋಧ ಪಕ್ಷಗಳು ಬಿಬಿಎಂಪಿ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿದ್ದವು.

ಶೋಕಾಚರಣೆಯ ಅವಧಿ ಏ.6ರಂದು ಮುಕ್ತಾಯವಾಗಲಿದೆ. ಪಾಲಿಕೆಯಲ್ಲಿ ಈಗಿನ ಮೇಯರ್‌ ಅವರ ಅಧಿಕಾರದ ಅವಧಿ ಇದೇ 10ರಂದು ಮುಕ್ತಾಯವಾಗಲಿದೆ. ಮುಂದೂಡಿಕೆಯಾದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಹಾಗೂ ಕೌನ್ಸಿಲ್‌ ಸಭೆಯನ್ನು ಅಷ್ಟರ ಒಳಗಾಗಿ ನಡೆಸಬೇಕಾಗಿದೆ.

‘ಬುಧವಾರ ನಡೆಯಬೇಕಿದ್ದ ಕೆಂಪೇಗೌಡ ಜಯಂತಿಯನ್ನು ನಮ್ಮ ಅಧಿಕಾರದ ಅವಧಿ ಮುಗಿಯುವುದರ ಒಳಗೆ ನಡೆಸುತ್ತೇವೆ. ಏ. 8ರಂದು ಅಥವಾ 9ರಂದು ಈ ಕಾರ್ಯಕ್ರಮ ನಡೆಸುವ ಚಿಂತನೆ ಇದೆ. ದಿನಾಂಕವನ್ನು ಶೀಘ್ರವೇ ಪ್ರಕಟಿಸುತ್ತೇವೆ’ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು