ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆರೆ ಮಿತ್ರ’: ಮಾರ್ಚ್‌ 25ರವರೆಗೆ ನೋಂದಣಿಗೆ ಅವಕಾಶ

Published 16 ಮಾರ್ಚ್ 2024, 0:05 IST
Last Updated 16 ಮಾರ್ಚ್ 2024, 0:05 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವಶದಲ್ಲಿರುವ ಕೆರೆಗಳ ನಿರ್ವಹಣೆಯಲ್ಲಿ ನಾಗರಿಕರು ‘ಕೆರೆ ಮಿತ್ರ’ ಸ್ವಯಂ ಸೇವಕರಾಗಿ ನೋಂದಾಯಿಸುವ ಅವಧಿಯನ್ನು ಮೂರನೇ ಬಾರಿಗೆ ವಿಸ್ತರಿಸಲಾಗಿದೆ. ಮಾರ್ಚ್‌ 25ರವರೆಗೆ ನಾಗರಿಕರು ನೋಂದಣಿ ಮಾಡಿಕೊಳ್ಳಬಹುದು.

124 ಕೆರೆಗಳಿಗೆ ಈಗಾಗಲೇ ಕೆರೆ ಮಿತ್ರ ಸ್ವಯಂಸೇವಕರನ್ನು ಆಯ್ಕೆ ಮಾಡಲಾಗಿದೆ. ಇನ್ನುಳಿದ ಕೆಲವು ಕೆರೆಗಳಿಗೆ ನಾಗರಿಕರು ನೋಂದಾಯಿಸದೆ ಇರುವುದರಿಂದ ಅವಧಿ ವಿಸ್ತರಿಸಲಾಗಿದೆ ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.

https://keremithra.bbmpgov.in/registration ಲಿಂಕ್‌ ಮೂಲಕ ನೋಂದಾಯಿಸಿಕೊಳ್ಳಬಹುದು. ಮೊದಲ ಹಂತದಲ್ಲಿ ‘ಕೆರೆ ಮಿತ್ರ’ರಾಗಲು 744 ಮಂದಿ ನೋಂದಾಯಿಸಿಕೊಂಡಿದ್ದರು. ಒಂದು ಕೆರೆಗೆ ಒಂದಕ್ಕಿಂತ ಹೆಚ್ಚು ನಾಗರಿಕರು ನೋಂದಾಯಿಸಿಕೊಂಡಿದ್ದು, ಒಬ್ಬರನ್ನು ಕಂಪ್ಯೂಟರ್ ಮೂಲಕ ರ‍್ಯಾಂಡಮೈಸ್‌ ಆಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕಚೇರಿ ಸ್ಥಳಾಂತರ: ಬಿಬಿಎಂಪಿ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ನಗರಯೋಜನೆ ಸಹಾಯಕ ನಿರ್ದೇಶಕ ಕಚೇರಿಯನ್ನು ಜಂಟಿ ಆಯುಕ್ತರ ಕಚೇರಿಯಿಂದ ಸ್ಥಳಾಂತರಿಸಲಾಗಿದೆ.

ಜೆ.ಪಿ ನಗರ, 8ನೇ ಹಂತ, ಗೊಟ್ಟಿಗೆರೆಯ ರಾಯಲ್‌ಕೌಂಟಿ ಬಡಾವಣೆಯ ಉದ್ಯಾನ ದಲ್ಲಿರುವ ಪಾಲಿಕೆ ಕಟ್ಟಡದ ಮೊದಲನೇ ಮಹಡಿಗೆ ಕಚೇರಿ ಸ್ಥಳಾಂತರಿಸಲಾಗಿದೆ ಎಂದು ನಗರ ಯೋಜನೆ ಸಹಾಯಕ ನಿರ್ದೇಶಕ  ಪ್ರಕಾಶ್ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT