ಕೋಗಿಲು ಬಡಾವಣೆಯಲ್ಲಿ ಮನೆ ಕಳೆದುಕೊಂಡವರ ಮಾಹಿತಿ ಸಂಗ್ರಹಿಸಿ ಕಂದಾಯ ಇಲಾಖೆ ಮತ್ತು ಉತ್ತರ ನಗರ ಪಾಲಿಕೆಯ ಅಧಿಕಾರಿಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಫಕೀರ್ ಕಾಲೊನಿಯ 40 ಮನೆ ತೆರವು ಮಾಡಲಾಗಿದ್ದು ಅದರಲ್ಲಿ 56 ಕುಟುಂಬಗಳಿದ್ದವು. ನ್ಯೂ ಫಕೀರ್ ಕಾಲೊನಿಯಲ್ಲಿ 45 ಮನೆ ತೆರವು ಮಾಡಿದ್ದು 50 ಕುಟುಂಬಗಳಿದ್ದವು. ವಸೀಂ ಲೇಔಟ್‌ನಲ್ಲಿ 82 ಮನೆ ತೆರವು ಮಾಡಿದ್ದು 82 ಕುಟುಂಬಗಳಿದ್ದವು. ಇವುಗಳಲ್ಲಿ 156 ಮುಸ್ಲಿಂ 31 ಹಿಂದೂ ಒಂದು ಕ್ರಿಶ್ಚಿಯನ್ ಕುಟುಂಬ ಎಂದು ಗುರುತಿಸಲಾಗಿದೆ. ದಾಖಲೆ ಪರಿಶೀಲನೆ: ಮನೆ ಕಳೆದುಕೊಂಡವರಿಂದ 250 ಅರ್ಜಿಗಳು ಬಂದಿದ್ದವು. ಅವರ ಮತದಾರರ ಚೀಟಿ ಆಧಾರ್ ಕಾರ್ಡ್ ಇನ್ನಿತರ ದಾಖಲೆಗಳನ್ನು ಪರಿಶೀಲಿಸಲಾಯಿತು. ಐದು ಜನರಲ್ಲಿ ದಾಖಲೆಗಳಿರಲಿಲ್ಲ. ಉಳಿದವರಲ್ಲಿ ಈ ದಾಖಲೆಗಳಿದ್ದವು ಎಂದು ಯಲಹಂಕ ತಹಶೀಲ್ದಾರ್ ಶ್ರೇಯಸ್ ತಿಳಿಸಿದ್ದಾರೆ.