ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಡನ ಜೊತೆ ಜಗಳ: ಕೆರೆಗಿಳಿದ ಪತ್ನಿ!

ಫಾಲೋ ಮಾಡಿ
Comments

ಬೆಂಗಳೂರು: ವಾಯುವಿಹಾರಕ್ಕೆ ಹೋಗಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಗಂಡನ ಜೊತೆ ಜಗಳ ಮಾಡಿಕೊಂಡ ಮಹಿಳೆಯೊಬ್ಬರು ಸಾಯುತ್ತೇನೆಂದು ಹೇಳಿ ಕೆರೆಯ ಮಧ್ಯಭಾಗಕ್ಕೆ ಹೋಗಿ ನಿಂತಿದ್ದ ಪ್ರಸಂಗ ಕೋರಮಂಗಲದಲ್ಲಿ ಭಾನುವಾರ ನಡೆದಿದೆ.

ಕೋರಮಂಗಲದ 3ನೇ ಬ್ಲಾಕ್‌ನಲ್ಲಿರುವ ಕೆರೆಯಲ್ಲಿ ಮಹಿಳೆ ನಿಂತಿರುವುದನ್ನು ಕಂಡು ಗಾಬರಿಯಾದ ನಾಗರಿಕರು ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾರೆ. ಮೇಲೆ ಬರುವಂತೆ ಗೋಗರೆದರೂ ಕೇಳದ ಆಕೆ ‘ನೀರಿನಲ್ಲಿ ಮುಳುಗಿ ಪ್ರಾಣ ಬಿಡುತ್ತೇನೆ’ ಎಂದು ಬೆದರಿಸಿದ್ದಾರೆ. ಇದರಿಂದ ಬೇಸತ್ತ ನಾಗರಿಕರು ಕೋರಮಂಗಲ ಪೊಲೀಸ್‌ ಠಾಣೆಗೆ ಕರೆಮಾಡಿ ಮಾಹಿತಿ ಮುಟ್ಟಿಸಿದ್ದಾರೆ.

‘ನಾವು ಎಷ್ಟೇ ಬೇಡಿದರೂ ಆಕೆ ದಡಕ್ಕೆ ಬರಲು ಒಪ್ಪಲಿಲ್ಲ. ರಕ್ಷಣೆ ಮಾಡಲು ಬಂದರೆ ಆಳವಾದ ಜಾಗಕ್ಕೆ ಹೋಗುತ್ತೇನೆ ಎಂದು ಹೆದರಿಸಿದಳು. ಆಕೆಯ ರಂಪಾಟದಿಂದ ಬೇಸತ್ತು ಪೊಲೀಸರಿಗೆ ಕರೆಮಾಡಿ ವಿಷಯ ತಿಳಿಸಿದೆವು. ಅವರು ಬಂದು ಆಕೆಯ ಮನವೊಲಿಸಿ ಮೇಲಕ್ಕೆ ಕರೆತಂದರು’ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT