ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಡಿಕೆ ಈಡೇರಿಸದಿದ್ದರೆ ಮುಷ್ಕರ: ಕೆಎಸ್‌ಡಿಎಲ್‌ ಕಾರ್ಮಿಕರ ಎಚ್ಚರಿಕೆ

Published : 7 ಆಗಸ್ಟ್ 2024, 0:53 IST
Last Updated : 7 ಆಗಸ್ಟ್ 2024, 0:53 IST
ಫಾಲೋ ಮಾಡಿ
Comments

ಬೆಂಗಳೂರು: ‘ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್. ಆ್ಯಂಡ್ ಡಿ.ಎಲ್.) ಮಾರುಕಟ್ಟೆ ವಿಭಾಗದ ಕಾರ್ಮಿಕರಿಗೆ ವೇತನ ಹೆಚ್ಚಳ, ಬೋನಸ್‌ ಒದಗಿಸುವಿಕೆ ಸೇರಿ ವಿವಿಧ ಬೇಡಿಕೆಗಳನ್ನು ಹದಿನೈದು ದಿನಗಳೊಳಗೆ ಈಡೇರಿಸಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಮುಷ್ಕರ ನಡೆಸಲಾಗುವುದು’ ಎಂದು ಕೆ.ಎಸ್. ಆ್ಯಂಡ್ ಡಿ.ಎಲ್. ಮಾರ್ಕೆಟಿಂಗ್ ಸ್ಟಾಫ್ ಆ್ಯಂಡ್ ವರ್ಕರ್ಸ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್‌. ಶಿವಶಂಕರ್‌, ‘ಸಂಸ್ಥೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ ಶೋಷಣೆ ಮಾಡಲಾಗುತ್ತಿದೆ. ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಕಾಯಂ ನೌಕರರಿಗೆ ₹ 65 ಸಾವಿರದಿಂದ ₹ 75 ಸಾವಿರ ವೇತನ ನೀಡಲಾಗುತ್ತಿದೆ. ಗುತ್ತಿಗೆ ಕಾರ್ಮಿಕರಿಗೆ ₹ 20 ಸಾವಿರದಿಂದ ₹ 25 ಸಾವಿರ ನೀಡಲಾಗುತ್ತಿದೆ. ತುಟ್ಟಿ ಭತ್ಯೆ, ಸಾರಿಗೆ ಭತ್ಯೆ ಸೇರಿ ವಿವಿಧ ಸೌಲಭ್ಯವನ್ನು ನೀಡದೆ ಶೋಷಣೆ ಮಾಡಲಾಗುತ್ತಿದೆ. ಉತ್ಪಾದನಾ ಹಾಗೂ ಇತರೆ ವಿಭಾಗಗಳ ಕಾರ್ಮಿಕರಿಗೆ ನೀಡಿದ ಸವಲತ್ತುಗಳನ್ನು ಮಾರುಕಟ್ಟೆ ವಿಭಾಗದ ನೌಕರರಿಗೂ ನಿಡಬೇಕು’ ಎಂದು ಆಗ್ರಹಿಸಿದರು.

‘ಮಾರುಕಟ್ಟೆ ವಿಭಾಗದ ನೌಕರರಿಗೆ ಎಂಟು ವರ್ಷಗಳಿಂದ ಬೋನಸ್ ನೀಡಿಲ್ಲ. ನಿವೃತ್ತಿಯಾದ ನೌಕರರನ್ನು ಪುನರ್‌ ನೇಮಕ ಮಾಡಬಾರದೆಂದು ಸರ್ಕಾರದ ಆದೇಶವಿದ್ದರೂ ನಿವೃತ್ತರನ್ನು ಮುಂದುವರಿಸಲಾಗಿದೆ. ಅವರನ್ನು ಕೂಡಲೇ ಕೆಲಸದಿಂದ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್. ಆ್ಯಂಡ್ ಡಿ.ಎಲ್.) ಮಾರುಕಟ್ಟೆ ವಿಭಾಗದ ಕಾರ್ಮಿಕರಿಗೆ ವೇತನ ಹೆಚ್ಚಳ, ಬೋನಸ್‌ ಒದಗಿಸುವಿಕೆ ಸೇರಿ ವಿವಿಧ ಬೇಡಿಕೆಗಳನ್ನು ಹದಿನೈದು ದಿನಗಳೊಳಗೆ ಈಡೇರಿಸಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಮುಷ್ಕರ ನಡೆಸಲಾಗುವುದು’ ಎಂದು ಕೆ.ಎಸ್. ಆ್ಯಂಡ್ ಡಿ.ಎಲ್. ಮಾರ್ಕೆಟಿಂಗ್ ಸ್ಟಾಫ್ ಆ್ಯಂಡ್ ವರ್ಕರ್ಸ್ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್‌. ಶಿವಶಂಕರ್‌, ‘ಸಂಸ್ಥೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದೆ ಶೋಷಣೆ ಮಾಡಲಾಗುತ್ತಿದೆ. ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಕಾಯಂ ನೌಕರರಿಗೆ ₹ 65 ಸಾವಿರದಿಂದ ₹ 75 ಸಾವಿರ ವೇತನ ನೀಡಲಾಗುತ್ತಿದೆ. ಗುತ್ತಿಗೆ ಕಾರ್ಮಿಕರಿಗೆ ₹ 20 ಸಾವಿರದಿಂದ ₹ 25 ಸಾವಿರ ನೀಡಲಾಗುತ್ತಿದೆ. ತುಟ್ಟಿ ಭತ್ಯೆ, ಸಾರಿಗೆ ಭತ್ಯೆ ಸೇರಿ ವಿವಿಧ ಸೌಲಭ್ಯವನ್ನು ನೀಡದೆ ಶೋಷಣೆ ಮಾಡಲಾಗುತ್ತಿದೆ. ಉತ್ಪಾದನಾ ಹಾಗೂ ಇತರೆ ವಿಭಾಗಗಳ ಕಾರ್ಮಿಕರಿಗೆ ನೀಡಿದ ಸವಲತ್ತುಗಳನ್ನು ಮಾರುಕಟ್ಟೆ ವಿಭಾಗದ ನೌಕರರಿಗೂ ನಿಡಬೇಕು’ ಎಂದು ಆಗ್ರಹಿಸಿದರು.

‘ಮಾರುಕಟ್ಟೆ ವಿಭಾಗದ ನೌಕರರಿಗೆ ಎಂಟು ವರ್ಷಗಳಿಂದ ಬೋನಸ್ ನೀಡಿಲ್ಲ. ನಿವೃತ್ತಿಯಾದ ನೌಕರರನ್ನು ಪುನರ್‌ ನೇಮಕ ಮಾಡಬಾರದೆಂದು ಸರ್ಕಾರದ ಆದೇಶವಿದ್ದರೂ ನಿವೃತ್ತರನ್ನು ಮುಂದುವರಿಸಲಾಗಿದೆ. ಅವರನ್ನು ಕೂಡಲೇ ಕೆಲಸದಿಂದ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT