ಗುರುವಾರ , ಆಗಸ್ಟ್ 5, 2021
23 °C

ಬೆಂಗಳೂರು | ಹೆಚ್ಚುವರಿ 1,100 ಬಸ್‌ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಿಂದ ಹೊರ ಜಿಲ್ಲೆಗಳಿಗೆ ಮಂಗಳವಾರ ಹೆಚ್ಚುವರಿಯಾಗಿ 1,100 ಬಸ್‌ಗಳ ಕಾರ್ಯಾಚರಣೆಗೆ ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.

ಸೋಮವಾರ ರಾತ್ರಿ 8 ಗಂಟೆ ತನಕ 1,100 ಬಸ್‌ಗಳಲ್ಲಿ 32 ಸಾವಿರ ಜನ ಬೆಂಗಳೂರಿನಿಂದ ಹೊರ ಊರುಗಳಿಗೆ ಪ್ರಯಾಣಿಸಿದ್ದಾರೆ. ಬಳ್ಳಾರಿ, ದಾವಣಗೆರೆ, ಹೊಸದುರ್ಗ, ಯಾದಗಿರಿ, ಹಾಸನ, ಕಲಬುರ್ಗಿ, ಶಿವಮೊಗ್ಗ, ತಿರುಪತಿ, ಅನಂತಪುರ, ಪಾವಗಡಕ್ಕೆ ಹೆಚ್ಚಿನ ಬಸ್‌ಗಳು ತೆರಳಿದವು.

‘ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳನ್ನು ಅಲ್ಲಿಗೆ ನಿಯೋಜನೆ ಮಾಡಲಾಗಿದೆ. ಮಂಗಳವಾರ ಬೆಳಿಗ್ಗೆ 6ರಿಂದ ರಾತ್ರಿ 8ರ ತನಕ ಬಸ್‌ಗಳ ಕಾರ್ಯಚರಣೆ ಇರಲಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು