ಮಂಗಳವಾರ, ಏಪ್ರಿಲ್ 13, 2021
30 °C
ಮುಷ್ಕರಕ್ಕೆ ಬೆಂಬಲ ಕೋರಿಕೆ

ಸಾರಿಗೆ ನೌಕರರಿಂದ ಭಿತ್ತಿಪತ್ರ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆರನೇ ವೇತನ ಆಯೋಗದ ಶಿಫಾರಸು ಅನ್ವಯಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರು, ಶನಿವಾರ ಅಲ್ಲಲ್ಲಿ ಭಿತ್ತಿಪತ್ರಗಳ ಪ್ರದರ್ಶನ ಮಾಡಿ ಗಮನ ಸೆಳೆದರು.

ಮೆಜೆಸ್ಟಿಕ್ ಸೇರಿ ಪ್ರಮುksrtಖ ಬಸ್ ನಿಲ್ದಾಣ, ಡಿಪೊಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ‘ಸಾರ್ವಜನಿಕರೇ ಕ್ಷಮಿಸಿ, ಸರ್ಕಾರ ನಮಗೆ ನೀಡಿದ ಭರವಸೆ ಮರೆತಿದೆ’, ‘6ನೇ ವೇತನ ಆಯೋಗದ ಆದೇಶ– ಸಾರಿಗೆ ನೌಕರರಿಗೆ ವಿಕಾಸ’, ‘ವೇತನ ಮತ್ತು ಸವಲತ್ತುಗಳಲ್ಲಿ ತಾರತಮ್ಯ ಆಗುತ್ತಿದೆ’, ‘ಸಾರಿಗೆ ನೌಕರರ ಸಮರಕ್ಕೂ ಸಿದ್ಧ, ಸಾವಿಗೂ ಸಿದ್ಧ’ ಎಂಬ ಭಿತ್ತಿಪತ್ರಗಳನ್ನು ನೌಕರರು ಪ್ರದರ್ಶಿಸಿದರು. ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕರಪತ್ರಗಳನ್ನು ಹಂಚಿ, ಹೋರಾಟ ಬೆಂಬಲಿಸುವಂತೆ ಮನವಿ ಮಾಡಿದರು.

‘ಸಿಬ್ಬಂದಿ ಸಾರಿಗೆ ನಿಗಮಗಳ ಎಲ್ಲಾ ಡಿಪೊಗಳಲ್ಲಿ ಭಾನುವಾರ ಧರಣಿ ನಡೆಸಲಿದ್ದಾರೆ. ಏ. 6ರಂದು ನೌಕರರು ಹಾಗೂ ಕುಟುಂಬದ ಸದಸ್ಯರೊಂದಿಗೆ ಸಾಮೂಹಿಕ ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ. 7ರಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ’ ಎಂದು ಸಾರಿಗೆ ನೌಕರರ ಕೂಟ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು