ಶನಿವಾರ, 25 ಅಕ್ಟೋಬರ್ 2025
×
ADVERTISEMENT
ADVERTISEMENT

ಬೆಂಗಳೂರು | ಸುರಂಗ ರಸ್ತೆ: ಲಾಲ್‌ಬಾಗ್‌ನೊಳಗೆ ‘ಶಾಫ್ಟ್‌’

ಗಿಡ–ಮರ ಕಡಿದು ಆಟೊ– ಟ್ಯಾಕ್ಸಿ ನಿಲ್ದಾಣ, ಬಸ್‌ ನಿಲ್ದಾಣ, ಮಾರುಕಟ್ಟೆ ನಿರ್ಮಾಣ l ಜಲಮೂಲ, ಬಂಡೆಗೆ ಧಕ್ಕೆ
Published : 24 ಅಕ್ಟೋಬರ್ 2025, 23:30 IST
Last Updated : 24 ಅಕ್ಟೋಬರ್ 2025, 23:30 IST
ಫಾಲೋ ಮಾಡಿ
Comments
ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಲಾಲ್‌ಬಾಗ್‌ ಒಳಗೇ ಸುರಂಗ ರಸ್ತೆಯ ಶಾಫ್ಟ್‌ ಬರಲಿದೆ ಎಂದು ಡಿಪಿಆರ್‌ನಲ್ಲಿ ಹೇಳಲಾಗಿದೆ. ಪರಿಸರಕ್ಕೆ ಧಕ್ಕೆಯಾಗುವುದನ್ನು ತಪ್ಪಿಸಲು ಈ ಸ್ಥಳದಿಂದ ಶಾಫ್ಟ್‌ ಅನ್ನು ಸ್ಥಳಾಂತರಿಸಬೇಕು. –ತಜ್ಞರ ಸಮಿತಿಯ ಅಭಿಪ್ರಾಯ
ಲಾಲ್‌ಬಾಗ್‌ನಲ್ಲಿರುವ ಜಲಮೂಲ ಬಂಡೆಯ ಸಮೀಪ ಶಾಫ್ಟ್‌ ನಿರ್ಮಾಣವಾಗುವ ಪ್ರದೇಶ
ಲಾಲ್‌ಬಾಗ್‌ನಲ್ಲಿರುವ ಜಲಮೂಲ ಬಂಡೆಯ ಸಮೀಪ ಶಾಫ್ಟ್‌ ನಿರ್ಮಾಣವಾಗುವ ಪ್ರದೇಶ
ಮೇಲ್ಭಾಗದಲ್ಲಿ ಏನೇನಿರಲಿದೆ?
ಬಸ್‌ ನಿಲ್ದಾಣ, ಆಟೊ–ಟ್ಯಾಕ್ಸಿ ನಿಲ್ದಾಣ, ಸ್ಕೈವಾಕ್‌, ವಾಣಿಜ್ಯ ಸಂಕೀರ್ಣ, ಲ್ಯಾಂಡ್‌ಸ್ಕೇಪ್ಡ್‌ ಪ್ಲಾಜಾ, ಡ್ರಾಪ್‌–ಆಫ್‌ ಝೋನ್. ಕಾರು ನಿಲ್ದಾಣ, ಇವಿ ಚಾರ್ಜಿಂಗ್‌ ಕೇಂದ್ರ, ತುರ್ತು ನಿರ್ಗಮನ, ಸಿ.ಸಿ.ಟಿ.ವಿ ಕ್ಯಾಮೆರಾ, ಎಸ್ಕಲೇಟರ್‌, ಎಲಿವೇಟರಸ್‌ ಮತ್ತು ಸೂಚನಾ ಫಲಕಗಳಿರಲಿವೆ.
‘ಶಾಫ್ಟ್‌’ ಕೆಳಭಾಗದಲ್ಲಿ ಏನು ಇರಲಿದೆ?
ಶಾಫ್ಟ್‌ನ ಕೆಳ ಅಂತಸ್ತುಗಳಲ್ಲಿ ಗಾಳಿಯಾಡುವ (ವೆಂಟಿಲೇಷನ್‌) ಸೌಲಭ್ಯವಿದ್ದು, ಇದರಲ್ಲಿ ಗಾಳಿ ಗುಣಮಟ್ಟ ನಿರ್ವಹಣೆ, ಬೃಹತ್‌ ಪ್ರಮಾಣದಲ್ಲಿ ಗಾಳಿಯನ್ನು ಹೊರಹಾಕುವ ವ್ಯವಸ್ಥೆ ಇರಲಿದೆ. ತುರ್ತು ಸೌಕರ್ಯಗಳಲ್ಲಿ, ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಅದನ್ನು ಶಮನಗೊಳಿಸುವ ಪರಿಣಾಮಕಾರಿ ವ್ಯವಸ್ಥೆ ಇರಲಿದೆ. ಜೊತೆಗೆ, ಅಧಿಕ ಸಾಮರ್ಥ್ಯದ ತುರ್ತು ಲಿಫ್ಟ್‌ಗಳನ್ನು ಅಳವಡಿಸಲಾಗುತ್ತದೆ. ವಿದ್ಯುತ್‌ ವಿತರಣೆ ಸೌಲಭ್ಯದೊಂದಿಗೆ, ಪವರ್‌ ಜನರೇಟರ್‌, ತಡೆರಹಿತ ವಿದ್ಯುತ್‌ ಸರಬರಾಜು ಘಟಕವಿರಲಿದೆ. ಒಳಚರಂಡಿ ವ್ಯವಸ್ಥೆ ಜೊತೆಗೆ ಕುಡಿಯುವ ನೀರು, ಅಗ್ನಿಶಾಮಕಕ್ಕೆ ನೀರನ್ನು ಶೇಖರಿಸಿಡಲಾಗುತ್ತದೆ. ತುರ್ತು ಸಂದರ್ಭದಲ್ಲಿ ಅನುಕೂಲವಾಗಲು ಇಂಟರ್‌ ಕಾಮ್‌, ತುರ್ತು ಸಂಪರ್ಕ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ
ಲಾಲ್‌ಬಾಗ್‌ನಲ್ಲಿ ನಿರ್ಮಾಣವಾಗಲಿರುವ ಶಾಫ್ಟ್‌ ಮಾದರಿ
ಲಾಲ್‌ಬಾಗ್‌ನಲ್ಲಿ ನಿರ್ಮಾಣವಾಗಲಿರುವ ಶಾಫ್ಟ್‌ ಮಾದರಿ
ಯೋಜನೆ ಕೈಬಿಡಿ: ದೇವರೆ
‘ಸುರಂಗ ರಸ್ತೆ ಲಾಲ್‌ಬಾಗ್‌ಗೆ ಧಕ್ಕೆಯನ್ನುಂಟು ಮಾಡಲಿದ್ದು, ವೈಜ್ಞಾನಿಕವಾಗಿ ಅಧ್ಯಯನ ಮಾಡದೆ ಯೋಜನೆಯನ್ನು ರೂಪಿಸಲಾಗಿದೆ. ಇದರಿಂದ, ಲಾಲ್‌ಬಾಗ್‌ನಲ್ಲಿರುವ ಜೀವವೈವಿಧ್ಯದ ಜೊತೆಗೆ ಜಲಮೂಲ, ಬೃಹತ್‌ ಬಂಡೆಗಳಿಗೆ ಧಕ್ಕೆಯಾಗುತ್ತದೆ. ರಾಜ್ಯ ಸರ್ಕಾರ ಈ ಯೋಜನೆಯನ್ನೇ ಕೈಬಿಡುವುದು ಉತ್ತಮ’ ಎಂದು ಪರಿಸರ ಕಾರ್ಯಕರ್ತ ಡಿ.ಟಿ. ದೇವರೆ ಹೇಳಿದರು.
ಲಾಲ್‌ಬಾಗ್‌ನೊಳಗಿನ ನಿರ್ಮಾಣವಾಗುವ ಶಾಫ್ಟ್‌ ಮಾದರಿ
ಲಾಲ್‌ಬಾಗ್‌ನೊಳಗಿನ ನಿರ್ಮಾಣವಾಗುವ ಶಾಫ್ಟ್‌ ಮಾದರಿ
ಹಸಿರು ನಾಶ: ವಿಜಯ್‌ ನಿಶಾಂತ್‌
‘ಲಾಲ್‌ಬಾಗ್‌ನಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಬಂಡೆ ಬಗ್ಗೆ ಹಲವು ರೀತಿಯ ವ್ಯಾಖ್ಯಾನಗಳಿವೆ. ಇದಕ್ಕೆ ಹೊಂದಿಕೊಂಡಂತೆಯೇ ಮೂರ್ನಾಲ್ಕು ಜಲಮೂಲಗಳಿವೆ. ಸುರಂಗ ರಸ್ತೆ ಇವುಗಳ ಕೆಳಗೆ ನಿರ್ಮಾಣವಾಗುವುದರಿಂದ ತೊಂದರೆಯಾಗುವುದು ನಿಶ್ಚಿತ. ಇನ್ನು ಮೇಲ್ಭಾಗದಲ್ಲಿ ‘ಶಾಫ್ಟ್‌’ ನಿರ್ಮಾಣವಾದರೆ ವಾಹನದಟ್ಟಣೆಯ ಜೊತೆಗೆ ಜನದಟ್ಟಣೆಯೂ ಉಂಟಾಗುತ್ತದೆ. ಲಾಲ್‌ಬಾಗ್‌ನ ಹಸಿರನ್ನು ನಾಶ ಮಾಡುವ ಇಂತಹ ಅಭಿವೃದ್ಧಿ ಕಾರ್ಯ ನಮಗೆ ಬೇಕಿಲ್ಲ’ ಎಂದು ಪರಿಸರ ಕಾರ್ಯಕರ್ತ ವಿಜಯ್‌ ನಿಶಾಂತ್‌ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT