ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿಯ 2022–2023 ಮತ್ತು 2023–24ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಆರು ಕಲಾ ಸಾಧಕರು ಆಯ್ಕೆಯಾಗಿದ್ದು, ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಅವರು ಪುರಸ್ಕೃತರ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದ್ದಾರೆ.

2022-23ನೇ ಸಾಲಿನ ಗೌರವ ಪ್ರಶಸ್ತಿಗೆ ಕಮಲ್ ಅಹಮದ್ (ಗದಗ), ನಿರ್ಮಲಾ ಕುಮಾರಿ (ತುಮಕೂರು), ಬಿ.ಪಿ. ಕಾರ್ತಿಕ್ (ಬೆಂಗಳೂರು); 2023–24ನೇ ಸಾಲಿನ ಗೌರವ ಪ್ರಶಸ್ತಿಗೆ ನಿಜಲಿಂಗಪ್ಪ ಹಾಲ್ವಿ (ಯಾದಗಿರಿ), ವಿಠಲ ರೆಡ್ಡಿ ಚುಳಕಿ (ಹುಬ್ಬಳ್ಳಿ) ಮತ್ತು ಬಾಬೂರಾವ್ ಎಚ್. (ಕಲಬುರಗಿ) ಅವರು ಭಾಜನರಾಗಿದ್ದಾರೆ. ಪ್ರಶಸ್ತಿಯು ತಲಾ ₹ 50 ಸಾವಿರ ನಗದು ಒಳಗೊಂಡಿದೆ.

51 ಹಾಗೂ 52ನೇ ವಾರ್ಷಿಕ ಕಲಾ ಬಹುಮಾನವನ್ನು ಪ್ರಕಟಿಸಲಾಗಿದ್ದು, 20 ಕಲಾವಿದರು ಆಯ್ಕೆಯಾಗಿದ್ದಾರೆ. 2021–2022 ಹಾಗೂ 2022–23ನೇ ಸಾಲಿನ ‘ವರ್ಣಶ್ರೀ ಪ್ರಶಸ್ತಿ’ಗೆ ತಲಾ ಹತ್ತು ಕಲಾ ಸಾಧಕರು ಆಯ್ಕೆಯಾಗಿದ್ದಾರೆ. ಕಲಾ ಬಹುಮಾನ ಹಾಗೂ ‘ವರ್ಣಶ್ರೀ ಪ್ರಶಸ್ತಿ’ ತಲಾ ₹ 25 ಸಾವಿರ ನಗದು ಒಳಗೊಂಡಿದೆ.

‘ವರ್ಣಶ್ರೀ ಪ್ರಶಸ್ತಿ’ ಪುರಸ್ಕೃತರು: 2021-22ನೇ ಸಾಲಿಗೆ ವೀಣಾ ಶ್ರೀನಿವಾಸನ್ (ಮಂಗಳೂರು), ಪರಮೇಶ ಜೋಳದ (ಬಾಗಲಕೋಟೆ), ಪಿ.ಎ.ಬಿ. ಈಶ್ವರ (ರಾಯಚೂರು), ಕುಡಲಯ್ಯ ಹಿರೇಮಠ (ಪುಣೆ), ಅಶೋಕ ಕಲ್ಲಶೆಟ್ಟಿ (ತುಮಕೂರು), ನಂದಬಸಪ್ಪ ವಾಡೆ (ವಿಜಯಪುರ), ಕೆ.ಜಿ. ಲಿಂಗದೇವರು (ರಾಮನಗರ), ಬಿ. ಮಹೇಶ (ಮಡಿಕೇರಿ), ಶಕುಂತಲಾ ವರ್ಣೇಕರ (ಹುಬ್ಬಳ್ಳಿ) ಮತ್ತು ಜಿ. ಮಂಜುನಾಥ (ಬಳ್ಳಾರಿ) ಪ್ರಶಸ್ತಿಗೆ ಭಾಜನರಾಗಿದ್ದಾರೆ.

2022-23ನೇ ಸಾಲಿಗೆ ಪ್ರಕಾಶ್ ನಾಯಕ್ (ಶಿರಸಿ), ಬಸವರಾಜ ಸಿ. ಕುತ್ನಿ (ಗದಗ), ಜಗದೀಶ್ ಕಾಂಬ್ಳೆ (ಕಲಬುರಗಿ), ಟಿ. ಜಯದೇವಣ್ಣ (ಹಾಸನ), ಶೈಲ ದೊತ್ರೆ (ಬಾಗಲಕೋಟೆ), ಸಿ. ಮಹದೇವ ಸ್ವಾಮಿ (ಚಾಮರಾಜನಗರ), ಮೀನಾಕ್ಷಿ ಸದಲಗಿ (ಬೆಳಗಾವಿ), ಕೆ.ಎಂ. ರವೀಶ್ (ತುಮಕೂರು), ಎಫ್.ವಿ. ಚಿಕ್ಕಮಠ (ಧಾರವಾಡ) ಮತ್ತು ಸಯ್ಯದ್ ಆಸೀಫ್ ಆಲಿ (ಮಂಗಳೂರು) ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಬಿ. ನೀಲಮ್ಮ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.