ಬೆಂಗಳೂರು: ಬಿಡಿಎ ನಿರ್ಮಿಸಲಿರುವ ‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್’ (ಬಿಬಿಸಿ) ಯೋಜನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, 2025ರ ಅಕ್ಟೋಬರ್ 17ರಂದು ಹೊರಡಿಸಿದ್ದ ಆದೇಶದಂತೆ ಭೂ ಮಾಲೀಕರಿಗೆ ಪರಿಹಾರ ನೀಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಬಿಬಿಸಿ ಯೋಜನೆಗೆ ಸ್ವಾಧೀನಪಡಿಸಿಕೊಂಡಿರುವ ಜಮೀನಿನಲ್ಲಿ, ಭೂಸ್ವಾಧೀನ ಕಾಯ್ದೆ–1894ರಡಿ ಐ–ತೀರ್ಪು ರಚಿಸಿ 948 ಎಕರೆ 14.5 ಗುಂಟೆ ವಿಸ್ತೀರ್ಣದ ಜಮೀನಿನಲ್ಲಿ ಒಪ್ಪಂದದಂತೆ, ಯಾವುದೇ ವ್ಯಾಜ್ಯಗಳಿಲ್ಲದೆ ಜಮೀನನ್ನು ಬಿಡಿಎಗೆ ಹಸ್ತಾಂತರಿಸುವ ಮಾಲೀಕರಿಗೆ ಅಕ್ಟೋಬರ್ ಆದೇಶದಂತೆ ನಾಲ್ಕು ಆಯ್ಕೆಗಳನ್ನು ನೀಡಿ ಪರಿಹಾರ ಪಾವತಿಸಲು ಸಚಿವ ಸಂಪುಟದಲ್ಲಿ ಸಮ್ಮತಿಸಲಾಗಿದೆ.

ಹೆಚ್ಚುವರಿ ಮೊತ್ತಕ್ಕೆ ಸಮ್ಮತಿ: ಬೆಂಗಳೂರು ಉಪನಗರ ಸಾರಿಗೆ ಯೋಜನೆಯ (ಬಿಎಸ್ಟಿಪಿ) ಕಾರಿಡಾರ್ 2 ಮತ್ತು 4ರ ಪರಿಷ್ಕೃತ ವೆಚ್ಚ ₹16,876 ಕೋಟಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಈ ಎರಡೂ ಕಾರಿಡಾರ್ಗೆ ₹3,066 ಕೋಟಿ ಭೂಸ್ವಾಧೀನ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಭವಿಷ್ಯದಲ್ಲಿ ಅಗತ್ಯವಿರುವ ಚತುಷ್ಪಥಕ್ಕೆ ₹357 ಕೋಟಿಯನ್ನು ರೈಲ್ವೆ ಸಚಿವಾಲಯ ನೀಡಬೇಕು. ಇತರೆ ವೆಚ್ಚಗಳನ್ನು ರಾಜ್ಯ ಸರ್ಕಾರ ಮತ್ತು ರೈಲ್ವೆ ಸಚಿವಾಲಯ 50:50ರ ಅನುಪಾತದಲ್ಲಿ ಭರಿಸಲು ಸಚಿವ ಸಂಪಟ ಸಮ್ಮತಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.