ಮಂಗಳವಾರ, ಜುಲೈ 5, 2022
26 °C

10 ತಿಂಗಳಿನಲ್ಲಿ 100 ಲ್ಯಾಪ್‌ಟಾಪ್‌ ಕಳವು: ಭದ್ರತಾ ಅಧಿಕಾರಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಲಸಕ್ಕಿದ್ದ ಕಂಪನಿಯ ಲ್ಯಾಪ್‌ಟಾಪ್‌ಗಳನ್ನು ಕದಿಯುತ್ತಿದ್ದ ಆರೋಪದಡಿ ಚಿನ್ನಬಥಿನಿ ಜಾನ್ ಪೌಲ್ (35) ಎಂಬುವರನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ತೆಲಂಗಾಣದ ಚಿನ್ನಬಥಿನಿ, ಕೆಲಸ ಅರಸಿ ನಗರಕ್ಕೆ ಬಂದು ಭದ್ರತಾ ಏಜೆನ್ಸಿಯೊಂದಕ್ಕೆ ಸೇರಿದ್ದ. ಈತನನ್ನು ಕಾಡುಬಿಸನಹಳ್ಳಿ ಬಳಿಯ ಒರ‍್ಯಾಕಲ್ ಇಂಡಿಯಾ ಕಂಪನಿಯ ಭದ್ರತಾ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು. ಅದೇ ಕಂಪನಿಯಲ್ಲಿದ್ದ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿಯಿಂದ ವಿವಿಧ ಕಂಪನಿಗಳ 67 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ. ಕದ್ದ ಲ್ಯಾಪ್‌ಟಾಪ್‌ ಮಾರಾಟದಿಂದ ಬಂದಿದ್ದ ಹಣದಲ್ಲಿ ಖರೀದಿಸಿದ್ದ ಚಿನ್ನಾಭರಣ ಹಾಗೂ ಕಾರನ್ನೂ ಸುಪರ್ದಿಗೆ ಪಡೆಯಲಾಗಿದೆ’ ಎಂದೂ ತಿಳಿಸಿದರು.

ಒಎಲ್‌ಎಕ್ಸ್, ಫೇಸ್‌ಬುಕ್‌ನಲ್ಲಿ ಮಾರಾಟ: ‘ಕದ್ದ ಲ್ಯಾಪ್‌ಟಾಪ್‌ಗಳ ಫೋಟೊವನ್ನು ಒಎಲ್‌ಎಕ್ಸ್ ಜಾಲತಾಣ ಹಾಗೂ ಫೇಸ್‌ಬುಕ್‌ ಮಾರ್ಕೆಟ್‌ಪ್ಲೇಸ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದ. ಕಂಪನಿ ಬಳಕೆ ಮಾಡಿದ ಲ್ಯಾಪ್‌ಟಾಪ್‌ ಎಂಬುದಾಗಿ ಹೇಳಿ ಗ್ರಾಹಕರಿಗೆ ಮಾರುತ್ತಿದ್ದ’ ಎಂದು ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು