ಬೆಂಗಳೂರು: ‘ಕಾನೂನು ಕಾಲೇಜುಗಳ ಹೆಸರು, ಅವುಗಳ ಮಾನ್ಯತೆ ಸೇರಿದಂತೆ ಎಲ್ಲ ವಿವರಗಳನ್ನೂ, ಭಾರತೀಯ ವಕೀಲರ ಪರಿಷತ್ (ಬಿಸಿಐ) ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು’ ಎಂದು ಹೈಕೋರ್ಟ್ ಬಿಸಿಐಗೆ ನಿರ್ದೇಶಿಸಿದೆ.

ಈ ಸಂಬಂಧ ಬಿಎಂಎಸ್ ಕಾನೂನು ಕಾಲೇಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

‘ಕಾನೂನು ಕಾಲೇಜುಗಳಿಗೆ ಮಾನ್ಯತೆ ನೀಡುವ ಅಧಿಕಾರ ಬಿಸಿಐಗೆ ಇದೆ. ಹೀಗಾಗಿ, ಅದು ತನ್ನ ವೆಬ್ಸೈಟ್ನಲ್ಲಿ ಅಗತ್ಯ ವಿವರಗಳನ್ನು ಪ್ರಕಟಿಸಬೇಕು. ಇಲ್ಲವಾದರೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ. ಆದ್ದರಿಂದ, ಅರ್ಜಿದಾರರ ಕಾಲೇಜಿನ ವಿವರಗಳನ್ನು 8 ವಾರಗಳಲ್ಲಿ ಬಿಸಿಐ ತನ್ನ ವೆಬ್ಸೈಟ್ನಲ್ಲಿ ಅಪ್ ಲೋಡ್ ಮಾಡಬೇಕು" ಎಂದು ನ್ಯಾಯಪೀಠ ಭಾರತೀಯ ವಕೀಲರ ಪರಿಷತ್ಗೆ ನಿರ್ದೇಶಿಸಿ ಅರ್ಜಿ ವಿಲೇವಾರಿ ಮಾಡಿದೆ.

ಪ್ರಕರಣವೇನು?: ಬಿಎಂಎಸ್ ಕಾನೂನು ಕಾಲೇಜು 1963ರಿಂದ ಮೂರು ಮತ್ತು ಐದು ವರ್ಷದ ಕಾನೂನು ಕೋರ್ಸ್ಗಳನ್ನು ನಡೆಸಿಕೊಂಡು ಬರುತ್ತಿದೆ. ಕಾಲಕಾಲಕ್ಕೆ ಮಾನ್ಯತೆ ನವೀಕರಣಕ್ಕೆ ಬಿಸಿಐಗೆ ಅರ್ಜಿ ಸಲ್ಲಿಸಿ ಮಾನ್ಯತೆ ನವೀಕರಣ ಮಾಡಿಸಿಕೊಳ್ಳುತ್ತಿದೆ. 2023-24ರಿಂದ ಮೂರು ವರ್ಷಗಳ ಕಾಲ ಅಂದರೆ; 2027-28ರವರೆಗೆ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸಿ ಅಗತ್ಯ ಶುಲ್ಕವನ್ನು ಪಾವತಿಸಿತ್ತು. ಆದರೆ, ಭಾರತೀಯ ವಕೀಲರ ಪರಿಷತ್ 2023ರ ಮೇ 15ರಂದು ಪ್ರಕಟಿಸಿದ ಮಾನ್ಯತೆ ನವೀಕರಿಸಿದ ಕಾನೂನು ಕಾಲೇಜುಗಳ ಪಟ್ಟಿಯಲ್ಲಿ ಬಿಎಂಎಸ್ ಕಾಲೇಜಿನ ಹೆಸರು ನಮೂದಾಗಿರಲಿಲ್ಲ. ಈ ಸಂಬಂಧ ಕಾಲೇಜು ಆಡಳಿತ ಮಂಡಳಿ ಬಿಸಿಐಗೆ ಮನವಿ ಸಲ್ಲಿಸಿತ್ತು. ಆದರೂ, ಅದು ತನ್ನ ವೆಬ್ಸೈಟ್ನಲ್ಲಿ ವಿವರ ಪ್ರಕಟಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಬಿಎಂಎಸ್ ಕಾಲೇಜು ಹೈಕೋರ್ಟ್ ಮೆಟ್ಟಿಲೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.