ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಬಂಡವಾಳಶಾಹಿಗಳ ಪರ ಸರ್ಕಾರ: ಯು. ಬಸವರಾಜ ವಾಗ್ದಾಳಿ

ಎಡ ಪಕ್ಷಗಳ ರಾಜ್ಯ ಮಟ್ಟದ ಸಮಾವೇಶ
Last Updated 17 ಜುಲೈ 2022, 3:21 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಆರ್ಥಿಕ ಸ್ಥಿತಿ ಸುಧಾರಣೆ, ತಲಾ ಆದಾಯದ ಹೆಚ್ಚಳ, ಸಾಮಾಜಿಕ ತಾರತಮ್ಯ ನಿವಾರಿಸಲು ಪರ್ಯಾಯ ನೀತಿಗಳನ್ನು ರೂಪಿಸಿ ಸೌಹಾರ್ದ ಕರ್ನಾಟಕವನ್ನು ಉಳಿಸಿಕೊಳ್ಳುವತ್ತ ಎಡ ಮತ್ತು ಜಾತ್ಯತೀತ ಪಕ್ಷಗಳು ಹೆಜ್ಜೆ ಇಟ್ಟಿವೆ.

ಶನಿವಾರ ಇಲ್ಲಿ ನಡೆದ ಸಮಾವೇಶದಲ್ಲಿ ಸಿಪಿಐ, ಸಿಪಿಐ(ಎಂ), ಎಸ್‌ಯುಸಿಐ, ಆರ್‌ಪಿಐ, ಸ್ವರಾಜ್ಇಂಡಿಯಾ, ಎಎಎಫ್‌ಬಿ, ಸಿಪಿಐ(ಎಂಎಲ್‌) ಪಕ್ಷದ ಪ್ರಮುಖರು ಈ ಸಮಾವೇಶದಲ್ಲಿ ಪಾಲ್ಗೊಂಡು ಸಮಾಲೋಚನೆ ನಡೆಸಿದರು.

ಸೌಹಾರ್ದ, ಸಮೃದ್ಧ ಮತ್ತು ಜನಪರ ಕರ್ನಾಟಕ ನಿರ್ಮಾಣಕ್ಕೆ ಅಗತ್ಯವಾದ ನೀತಿಗಳನ್ನು ರೂಪಿಸುವ ಬಗ್ಗೆ ಚರ್ಚೆ ನಡೆಯಿತು.

2021ರ ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ ಪ್ರತಿ ಕುಟುಂಬದ ವಾರ್ಷಿಕ ಆದಾಯ ₹1 ಲಕ್ಷಕ್ಕಿಂತ ಕಡಿಮೆ ಇದೆ. ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಪ್ರತಿಯೊಬ್ಬರ ತಲಾ ಆದಾಯ ಕೇವಲ ₹50ಕ್ಕಿಂತ ಕಡಿಮೆ ಇದೆ. ಸರ್ಕಾರಗಳು ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿರುವುದಕ್ಕೆಇದೇ ಸಾಕ್ಷಿ. ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಹೇಳಿದರು.

ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ. ಬಯ್ಯಾರೆಡ್ಡಿ ಮಾತನಾಡಿ, ’2020ರ ಭೂ ಸುಧಾರಣಾ ತಿದ್ದುಪಡಿಕಾಯ್ದೆ ಹಿಂಪಡೆಯಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು. ಕಾರ್ಪೊರೇಟ್ ಕೃಷಿಗೆ ಬದಲಾಗಿ ಸಹಕಾರಿ ಕೃಷಿ ಅಭಿವೃದ್ಧಿಗೊಳಿಸಬೇಕು. ಎಂದು ಆಗ್ರಹಿಸಿದರು. ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿದರು.

ಕ್ಲಿಫ್ಟನ್.ಡಿ.ರೊಸಾರಿಯೋ ಶಿವಶಂಕರ್ ಜಿ. ಆರ್., ಆರ್. ಮೋಹನ್ ರಾಜ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT