ರಾಜಕಾರಣಿಗಳ ಮಕ್ಕಳ ಮಾಹಿತಿಯೂ ಹೊರಬರಲಿ

ಬೆಂಗಳೂರು: ಡ್ರಗ್ ಜಾಲದಲ್ಲಿ ರಾಜಕಾರಣಿಗಳ ಮಕ್ಕಳು ಇದ್ದರೆ, ಆ ಮಾಹಿತಿಯನ್ನೂ ಬಹಿರಂಗಪಡಿಸಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಯಾರೆಲ್ಲಾ ಇಂತಹ ಕೆಟ್ಟ ಕೆಲಸ ಮಾಡಿದ್ದಾರೋ ಆ ಮಾಹಿತಿ ಹೊರಗೆ ಬರಬೇಕು. ಅದರಲ್ಲಿ ಯಾವುದೇ ಮುಚ್ಚು ಮರೆ ಬೇಕಿಲ್ಲ’ ಎಂದು ಹೇಳಿದರು.
‘ಮಾದಕದ್ರವ್ಯಗಳ ನಿಯಂತ್ರಣಕ್ಕೆ ಈಗಿನ ಗೃಹ ಸಚಿವರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಹಿಂದೆ ಎಂ.ಬಿ.ಪಾಟೀಲ ಅವರೂ ಗೃಹ ಸಚಿವರು ಆಗಿದ್ದರು. ಅವರಲ್ಲಿ ಈ ವಿಷಯವಾಗಿ ಹೆಚ್ಚಿನ ಮಾಹಿತಿ ಇದ್ದರೆ ಸರ್ಕಾರಕ್ಕೆ ನೀಡಲಿ’ ಎಂದು ಹೇಳಿದ್ದಾರೆ.
‘ಪೊಲೀಸ್ ಇಲಾಖೆ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಸಿನಿಮಾ ರಂಗ ಮಾತ್ರವಲ್ಲ, ಯಾವುದೇ ರಂಗದಲ್ಲೂ ಈ ವ್ಯವಸ್ಥೆ ಇದ್ದರೆ, ಸತ್ಯಾಂಶ ಹೊರಗೆ ಬರಬೇಕು. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಎಲ್ಲಿಗೆ ಹೋಗಿ ತಲುಪುತ್ತದೆಯೋ ನೋಡೋಣ’ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.