ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಗೆ ರಾಜ್ಯ ಸರ್ಕಾರ ರೂಪಿಸಿರುವ ನಿಯಮದಂತೆ ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5ರವರೆಗೆ ನಗರದಲ್ಲಿ ಲಾಕ್ಡೌನ್ ಜಾರಿಯಾಗಲಿದೆ.

ಈ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಲಾಕ್ಡೌನ್ ಸಮಯದ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು’ ಎಂದರು.

’ಬೆಂಗಳೂರು ಜನರು ಈಗಾಗಲೇ ಲಾಕ್ಡೌನ್ಗಳನ್ನು ನೋಡಿದ್ದಾರೆ. ಅವರಿಗೆ ಈ ಲಾಕ್ಡೌನ್ ಹೊಸದಲ್ಲ. ಲಾಕ್ಡೌನ್ ಭದ್ರತೆಗೆ ಈಗಾಗಲೇ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಸುಖಾ ಸುಮ್ಮನೆ ರಸ್ತೆಯಲ್ಲಿ ಓಡಾಡಬಾರದು’ ಎಂದೂ ಹೇಳಿದರು.

‘ಅಗತ್ಯ ವಸ್ತುಗಳು, ತರಕಾಡಿ, ದಿನಸಿ ಅಂಗಡಿಗಳು ಯಥಾಪ್ರಕಾರ ಇರಲಿವೆ. ಆಸ್ಪತ್ರೆಗಳು, ಔಷಧಿ ಅಂಗಡಿಗಳು ತೆರೆದಿರಲಿವೆ. ಹೋಟೆಲ್ಗಳೂ ಇರಲಿದ್ದು, ಪಾರ್ಸಲ್ ಸೇವೆಗೆ ಮಾತ್ರ ಅವಕಾಶವಿದೆ. ಮಾಂಸದ ಅಂಗಡಿಗಳಿಗೂ ಅವಕಾಶ ನೀಡಲಾಗಿದೆ’ ಎಂದರು.

ಮೃತ ಪೊಲೀಸರಿಗೆ ಶ್ರದ್ಧಾಂಜಲಿ:ಕೊರೊನಾ ಸೋಂಕು ತಗುಲಿ ಮೃತಪಟ್ಟ ನಗರದ ಐವರು ಪೊಲೀಸರಿಗೆ ಕಮಿಷನರ್ ಭಾಸ್ಕರ್ ರಾವ್ ಶ್ರದ್ಧಾಂಜಲಿ ಸಲ್ಲಿಸಿದರು.

ಕಮಿಷನರ್ ಕಚೇರಿಯಲ್ಲಿ ಐದು ಪೊಲೀಸರ ಫೋಟೊಗಳನ್ನು ಇಟ್ಟು ಪುಷ್ಪ ನಮನ ಸಲ್ಲಿಸಲಾಯಿತು. ಹೆಚ್ಚುವರಿ ಪೊಲೀಸ್ ಕಮಿಷನರ್ ಮುರುಗನ್, ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹಾಗೂ ಸಿಬ್ಬಂದಿ ಇದ್ದರು.

ಏನಿರುತ್ತೆ?
ಅಗತ್ಯ ವಸ್ತುಗಳು, ತರಕಾರಿ, ದಿನಸಿ ಅಂಗಡಿಗಳು, ಆಸ್ಪತ್ರೆಗಳು, ಔಷಧಿ ಅಂಗಡಿಗಳು, ಹೋಟೆಲ್ಗಳು (ಪಾರ್ಸೆಲ್ ಮಾತ್ರ), ಮಾಂಸದ ಅಂಗಡಿ.

ಏನಿರಲ್ಲ?
ಬಸ್, ಆಟೊ, ಕ್ಯಾಬ್, ಟ್ಯಾಕ್ಸಿ, ಮದ್ಯದ ಅಂಗಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.