ಭಾನುವಾರ, ಫೆಬ್ರವರಿ 23, 2020
19 °C

ಸಹೋದರಿಯರ ನಾಟ್ಯ ಪ್ರೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭರತನಾಟ್ಯ ಕಲೆಯಲ್ಲಿ ಭವಿಷ್ಯ ಕಾಣುವ ಹಂಬಲದ ಗಾಯತ್ರಿ ಹಾಗೂ ರಿತಿಕಾ ಸಹೋದರಿಯರು ಭಾನುವಾರ ಎಡಿಎ ರಂಗಮಂದಿರದಲ್ಲಿ ನಡೆದ ಭರತನಾಟ್ಯ ರಂಗಪ್ರವೇಶದ ಮೂಲಕ ತಮ್ಮ ಕನಸಿನ ಮೊದಲ ಮೊಟ್ಟಿಲು ಏರಿದ್ದಾರೆ.

ಗಾಯತ್ರಿ ಹಾಗೂ ರಿತಿಕಾ ಅವರ ನಾಟ್ಯ ಆಸಕ್ತಿ ಚಿಗುರಿದ್ದು ಬಾಲ್ಯದಿಂದಲೇ. ಈ ಇಬ್ಬರು ಸಹೋದರಿಯರಲ್ಲಿ ನಾಟ್ಯ ಪ್ರೀತಿಗೆ ಮೂಲ ಪ್ರೇರಣೆ ಭರತನಾಟ್ಯ ಕಲಾವಿದೆಯೂ ಆಗಿರುವ ತಾಯಿ ಅನುರಾಧಾ. ತಮ್ಮ ಅಪೂರ್ಣ ಕನಸನ್ನು ಮಕ್ಕಳ ಮೂಲಕ ನನಸಾಗಿಸುತ್ತಿದ್ದಾರೆ. ತಾಯಿಯ ಮಾರ್ಗದರ್ಶನದಲ್ಲಿಯೇ ಆರಂಭಿಕ ನೃತ್ಯ ಪಾಠ ಕಲಿತ ಈ ಸಹೋದರಿಯರಿಗೆ ಈಗ ಮಿಥುನ್ ಶಾಮ್ ಗುರು.

ಗಾಯತ್ರಿ ಅವರು ಆರ್.ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂ.ಟೆಕ್ ಅಧ್ಯಯನ ಮಾಡುತ್ತಿದ್ದಾರೆ. ರಿತಿಕಾ ಅದೇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾರೆ.

ರಂಗಪ್ರವೇಶ ಕಾರ್ಯಕ್ರಮದಲ್ಲಿ ಭರತನಾಟ್ಯ ಮತ್ತು ಕೂಚಿಪುಡಿ ಕಲಾವಿದೆ ಆನಂದ ಶಂಕರ ಜಯಂತ್, ಆರ್‌ವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಕೆ.ಪಾಂಡುರಂಗ ಶೆಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು