ಬುಧವಾರ, ಜೂನ್ 3, 2020
27 °C

ಫೋರ್ಬ್ಸ್‌ ಪಟ್ಟಿಯಲ್ಲಿ ಬೆಂಗಳೂರಿನ ಮಾಧವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಉದ್ಯಮಿ ಮಾಧವಿ ಶಂಕರ್, ಪೋರ್ಬ್ಸ್‌ ಏಷ್ಯಾ 30 ವರ್ಷದೊಳಗಿನವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 

ನಗರದ ಸಿಎಂಆರ್‌ಐಟಿಯ ಹಳೆಯ ವಿದ್ಯಾರ್ಥಿನಿಯಾಗಿರುವ ಮಾಧವಿ, ‘ಸ್ಪೇಸ್‌ಬೇಸಿಕ್’ ಎಂಬ ನವೋದ್ಯಮದ ಸಹ ಸಂಸ್ಥಾಪಕಿಯೂ ಹೌದು. 

‘ಹಾಸ್ಟೆಲ್‌ ಮ್ಯಾನೇಜ್‍ಮೆಂಟ್ ಫಾರ್ ಸ್ಟೂಡೆಂಟ್ಸ್ ಯೂಸಿಂಗ್ ಕ್ರಾಸ್-ಪ್ಲಾಟ್‍ಫಾರಂ ಕಮ್ಯುನಿಕೇಷನ್’ನಲ್ಲಿ ಹಕ್ಕುಸ್ವಾಮ್ಯ ಪಡೆದಿದ್ದಾರೆ. ಫೋರ್ಬ್ಸ್‌ ಏಷ್ಯಾ ಪತ್ರಿಕೆಯು, ಏಷ್ಯಾದ ಯುವ ಉದ್ಯಮಿಗಳು, ನಾಯಕರು ಮತ್ತು ಹೊಸ ಮನ್ವಂತರಕ್ಕೆ ಕಾರಣವಾಗುವಂತಹ 30 ವಯಸ್ಸಿಗಿಂತ ಕಿರಿಯರ ಪಟ್ಟಿ ಮಾಡಿದೆ.

2018ರಿಂದಲೂ ಬೆಂಗಳೂರಿನ ಮಾಧವಿ ಭಾರತವನ್ನು ಪರಿವರ್ತಿಸುತ್ತಿರುವ ಶ್ರೇಷ್ಠ 60 ಮಹಿಳೆಯರ ಪಟ್ಟಿಯಲ್ಲಿದ್ದಾರೆ. ಈ ಪಟ್ಟಿಯನ್ನು ವಿಶ್ವಸಂಸ್ಥೆ ಮತ್ತು ಭಾರತ ಸರ್ಕಾರ ಸಿದ್ಧಪಡಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು