ಗುರುವಾರ , ಜನವರಿ 21, 2021
30 °C

ಕಮ್ಮನಹಳ್ಳಿ: ಮಲಬಾರ್ ನೂತನ ಮಳಿಗೆ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದ ಪ್ರತಿಷ್ಠಿತ ವಜ್ರ ಮತ್ತು ಚಿನ್ನಾಭರಣಗಳ ಮಾರಾಟ ಕಂಪನಿ ಮಲಬಾರ್‌ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌ನ ನೂತನ ಮಳಿಗೆ ನಗರದ ಕಮ್ಮನಹಳ್ಳಿಯಲ್ಲಿ ಕಾರ್ಯಾರಂಭ ಮಾಡಿದೆ. ಕಂಪನಿಯ ಮುಖ್ಯಸ್ಥ ಎಂಪಿ. ಅಹಮ್ಮದ್‌ ವರ್ಚುವಲ್‌ ರೂಪದಲ್ಲಿ ಈ ಮಳಿಗೆಯನ್ನು ಉದ್ಘಾಟಿಸಿದರು.

ನಗರದ ಕಮ್ಮನಹಳ್ಳಿಯ ಪ್ರೆಸ್ಟೀಜ್‌ ಉತ್ತರ ಭಾಗದಲ್ಲಿರುವ ಇದು ನಗರದಲ್ಲಿರುವ ಮಲಬಾರ್ ಕಂಪನಿಯ ಎಂಟನೇ ಮಳಿಗೆ. ಈ ಶಾಖೆಯ ಮೂಲಕ ರಾಜ್ಯದಲ್ಲಿ ಮಲಬಾರ್ ಕಂಪನಿಗಳ ಮಳಿಗೆಗಳ ಸಂಖ್ಯೆ 24ಕ್ಕೆ ಏರಿದೆ.

ಆಧುನಿಕ ಮತ್ತು ವಿಭಿನ್ನ ವಿನ್ಯಾಸದ ಚಿನ್ನಾಭರಣಗಳ ಸಂಗ್ರಹ ಈ ಮಳಿಗೆಯಲ್ಲಿದೆ. ಚಿನ್ನಾಭರಣ ವಿಮೆ, ಪ್ರಮಾಣೀಕೃತ ವಜ್ರಗಳು, ಶೇ 100ರಷ್ಟು ಬಿಐಎಸ್‌ ಹಾಲ್‌ಮಾರ್ಕ್ ಹೊಂದಿರುವ ಚಿನ್ನ, ಬೆಲೆ ಮತ್ತು ಗುಣಮಟ್ಟದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಹಳೆಯ ಚಿನ್ನಾಭರಣಗಳನ್ನು ಗರಿಷ್ಠ ಬೆಲೆ ನೀಡಿ ಕೊಂಡುಕೊಳ್ಳಲಾಗುತ್ತದೆ. ಗ್ರಾಹಕರು ಶೇ 10ರಷ್ಟು ಮುಂಗಡ ಹಣ ಪಾವತಿಸಿ ಆಭರಣಗಳನ್ನು ಕಾಯ್ದಿರಿಸಬಹುದು ಎಂದೂ ಕಂಪನಿ ಹೇಳಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು