‘ಆರ್.ಆರ್.ನಗರದ ಗೊಟ್ಟಿಗೆರೆಯ ಅವನಿ ಹಿಲ್ಸ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ದಯಾನಂದ ಅವರು ಕುಟುಂಬದವರ ಜತೆಗೆ ನೆಲೆಸಿದ್ದರು. ಅಪಾರ್ಟ್‌ಮೆಂಟ್‌ನ ಸ್ನೇಹಿತರಾದ ಸಂದೀಪ್, ಶರತ್ ಹಾಗೂ ವಿರೂಪಾಕ್ಷ ಅವರ ಜತೆಗೆ ಈಜುಕೊಳಕ್ಕೆ ತೆರಳಿದ್ದರು. ನಂತರ, ಶರತ್ ಅವರ ಪತ್ನಿ ಪಲ್ಲವಿ ಮನೆಗೆ ಬಂದು ದಯಾನಂದ ಅವರು ನೀರಿನಲ್ಲಿ ಮುಳುಗಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಎಂಬುದಾಗಿ ಮಾಹಿತಿ ನೀಡಿದ್ದರು. ಆಸ್ಪತ್ರೆಗೆ ತೆರಳಿ ನೋಡಿದಾಗ ತುರ್ತು ನಿಗಾ ಘಟಕದಲ್ಲಿ ಅವರನ್ನು ಇಡಲಾಗಿತ್ತು. ಅವರು ಪ್ರಜ್ಞೆ ತಪ್ಪಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.