ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಬೆಳ್ಳಂದೂರಿನ ಪಬ್ವೊಂದರಲ್ಲಿ ಯುವಕನೊಬ್ಬ ಯುವತಿ ಜತೆಗೆ ಅನುಚಿತವಾಗಿ ವರ್ತಿಸಿದ್ದು, ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಒಡಿಶಾದ ಯುವತಿಗೆ ಕಿರುಕುಳ ನೀಡಿದ್ದ ಆರೋಪದಡಿ ಪ್ರಕರಣದ ದಾಖಲಿಸಿಕೊಳ್ಳಲಾಗಿದೆ. ಹೊಸ ವರ್ಷದ ಪಾರ್ಟಿಗೆಂದು ಯುವತಿಯು ಸ್ನೇಹಿತನ ಜತೆಗೆ ಪಬ್ಗೆ ಬಂದಿದ್ದರು. ಅದೇ ಪಬ್ನಲ್ಲಿದ್ದ ಆರೋಪಿ, ಮದ್ಯ ಸೇವಿಸುವಂತೆ ಯುವತಿಯನ್ನು ಕೇಳಿಕೊಂಡಿದ್ದ. ಅದನ್ನು ಯುವತಿ ನಿರಾಕರಿಸಿದ್ದರು. ಆಗ ಅನುಚಿತವಾಗಿ ವರ್ತಿಸಿದ್ದ ಆರೋಪಿ, ಸ್ಥಳದಿಂದ ಪರಾರಿ ಆಗಿದ್ದಾನೆ’ ಎಂದು ಮೂಲಗಳು ತಿಳಿಸಿವೆ.

‘ಅಸಭ್ಯ ವರ್ತನೆ ಮತ್ತು ಕಿರುಕುಳ ನೀಡಿದ ಆರೋಪದ ಅಡಿ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.

ದೂರು ನೀಡಲು ತೆರಳಿದ್ದ ಮಹಿಳೆಗೆ ಠಾಣೆಯಲ್ಲೇ ಲೈಂಗಿಕ ಕಿರುಕುಳ

ಮಧುಗಿರಿ: ದೂರು ನೀಡಲು ತೆರಳಿದ್ದ ಮಹಿಳೆಯೊಬ್ಬರ ಜತೆ ಪೊಲೀಸ್ ಅಧಿಕಾರಿಯೊಬ್ಬರು ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಜಮೀನು ವ್ಯಾಜ್ಯ ಕುರಿತು ದೂರು ನೀಡಲು ತೆರಳಿದ್ದ ಮಹಿಳೆ ಪಾವಗಡ ತಾಲ್ಲೂಕಿನವರು ಎನ್ನಲಾಗಿದೆ. ಮಹಿಳೆಯ ಮೇಲೆ ಕಚೇರಿಯ ಶೌಚಾಲಯದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ದೃಶ್ಯವನ್ನು ಶೌಚಾಲಯದ ಕಿಟಕಿಯಿಂದ ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ
ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಹಿರಿಯ ಅಧಿಕಾರಿಗಳಿಗೆ ವರದಿ: ವಿಡಿಯೊ ಪರಿಶೀಲಿಸಲಾಗಿದೆ. ಮಹಿಳೆ ಯಾರೆಂಬುದು ಗೊತ್ತಿಲ್ಲ. ಈವರೆಗೂ ಯಾರೂ ದೂರು ನೀಡಿಲ್ಲ. ಡಿವೈಎಸ್ಪಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಅವರ ಸೂಚನೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.